ಬರ ಪರಿಸ್ಥಿತಿ ನಿಭಾಯಿಸಲು ಸನ್ನದ್ದರಾಗಿ – ಅಧಿಕಾರಿಗಳಿಗೆ ಮಂಡ್ಯ ಜಿಲ್ಲಾ ಮಂತ್ರಿ ಸೂಚನೆ

Team Newsnap
1 Min Read

ಮಂಡ್ಯ : ಬರ ಪರಿಸ್ಥಿತಿ ನಿಭಾಯಿಸಲು ಸನ್ನದ್ದರಾಗಿ – ಅಧಿಕಾರಿಗಳಿಗೆ ಜಿಲ್ಲಾ ಮಂತ್ರಿ ಎನ್ ಚಲುವರಾಯಸ್ವಾಮಿ ಮಂಗಳವಾರ ಸೂಚನೆ ನೀಡಿದರು.

ಮಂಡ್ಯ ಜಿಪಂ ಸಭಾಂಗಣದಲ್ಲಿ ಬರಪರಿಸ್ಥಿತಿ ಅವಲೋಕನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ ವಾರದೊಳಗೆ ಕೇಂದ್ರಕ್ಕೆ ಬರ ಅಧ್ಯಯನ ಸಮಿತಿ ಬರ ಪರಿಸ್ಥಿತಿ ಅರಿಯಲು ಆಗಮಿಸಲಿದೆ. ಈ ವೇಳೆ ಬರ ನಷ್ಟದ ವರದಿ ಸಲ್ಲಿಕೆ ಮಾಡಲಾಗುವುದು ಎಂದರು

WhatsApp Image 2023 09 19 at 1.27.40 PM

ಸಧ್ಯಕ್ಕೆ ಬರದಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಕುಡಿಯುವ ನೀರಿಗೆ ಅದ್ಯತೆ ಕೊಡಿ. ದನಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಿ ಗ್ರಾಮ ಲೆಕ್ಕಾಧಿಕಾರಿ ಗಳು ಹಾಗೂ ಕಂದಾಯ ಅಧಿಕಾರಿಗಳು ಶಾಸಕ ಸಲಹೆ ಮಾರ್ಗದರ್ಶನ ಪಡೆದು ಕೆಲಸ ಮಾಡಿ ಪ್ರತಿ ವಾರವೂ ಸಭೆ ಮಾಡಿ ಕುಡಿಯುವ ನೀರಿನ ಕೊರತೆ ಆಗದಂತೆ ಪರಿಸ್ಥಿತಿ ನಿಭಾಯಿಸಿ ಎಂದರು. ಮಂಡ್ಯದಲ್ಲಿ ಜನವರಿಯಿಂದ ಕ್ಯಾನ್ಸರ್ ಆಸ್ಪತ್ರೆ ಆರಂಭ: ಎನ್ ಚಲುವರಾಯಸ್ವಾಮಿ

ಕೆರೆಗಳಿಗೆ ನೀರು ತುಂಬಿಸಿ :

ನಾಟಿ ಮಾಡಿರುವ ಭತ್ತ, ಕಬ್ಬು ಬೆಳೆಗಳಿಗೆ ಸಧ್ಯಕ್ಕೆ ನೀರು ಕೊಡಿ ಜೊತೆಗೆ ಕೆರೆ ತುಂಬಿಸುವುದಕ್ಕೆ ಆದ್ಯತೆ ನೀಡಿ ಎಂದು ಸಚಿವರು ಸಲಹೆ ನೀಡಿದರು

ಬರ ಪರಿಸ್ಥಿತಿ ನಿಭಾಯಿಸಲು ಸನ್ನದ್ದರಾಗಿ – ಅಧಿಕಾರಿಗಳಿಗೆ ಮಂಡ್ಯ ಜಿಲ್ಲಾ ಮಂತ್ರಿ ಸೂಚನೆ – Mandya District Minister instructs officials to be prepared to deal with drought situation best mandya news

Share This Article
Leave a comment