November 15, 2024

Newsnap Kannada

The World at your finger tips!

WhatsApp Image 2022 10 31 at 11.15.02 AM

50 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಸಿದ್ಧತೆ

Spread the love

₹50 ಸಾವಿರ ಕೋಟಿ ವೆಚ್ಚದಲ್ಲಿ ಒಟ್ಟು 699 ಕಿ.ಮೀ. ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಉದ್ದೇಶಿತ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ್ದು, ಈ ಸಂಬಂಧ ವಿವರವಾದ ಯೋಜನಾ ವರದಿ ತಯಾರಿಸುತ್ತಿದೆ.ಭಾರತ್‌ ಮಾಲಾ ಹಂತ-2ರ ಅಡಿಯಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಿಸಲು ನಿರ್ಧರಿಸಲಾಗಿದೆ.

ಪುಣೆಯ ಕಂಜಾಳೆಯಲ್ಲಿ ಆರಂಭವಾಗಲಿರುವ ಮಾರ್ಗವು ದೊಡ್ಡಬಳ್ಳಾಪುರ ತಾಲ್ಲೂಕಿನ ಮುತುಗದಹಳ್ಳಿಯ ಹೊರ ವರ್ತುಲ ರಸ್ತೆಯಲ್ಲಿ ಕೊನೆಗೊಳ್ಳಲಿದೆ. ಕರ್ನಾಟಕದಲ್ಲಿ ಈ ಮಾರ್ಗ ಅಥಣಿ ತಾಲ್ಲೂಕಿನ ಬೊಮ್ಮನಾಳ್‌ನಲ್ಲಿ ಆರಂಭವಾಗಲಿದ್ದು, ಅಥಣಿ, ಜಮಖಂಡಿ, ಬಾಗಲಕೋಟೆ, ಮುಧೋಳ, ಬಾದಾಮಿ, ನರಗುಂದ, ರೋಣ, ಯಲಬುರ್ಗ, ಕೊಪ್ಪಳ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಜಗಳೂರು, ಚಿತ್ರದುರ್ಗ, ಸಿರಾ, ಮಧುಗಿರಿ, ಕೊರಟಗೆರೆ, ತುಮಕೂರು, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಮೂಲಕ ಹಾದುಹೋಗಲಿದೆ. ಮಹಾರಾಷ್ಟ್ರದಲ್ಲಿ ಪುಣೆ, ಸತಾರ ಮತ್ತು ಸಾಂಗ್ಲಿ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ.

ಉದ್ದನೆಯ ಮಾರ್ಗ ನಿರ್ಮಾಣ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಆರು ಪಥಗಳ ಈ ಮಾರ್ಗವು ಕರ್ನಾಟಕದಲ್ಲೇ ಅತಿ ಹೆಚ್ಚು ದೂರ (498 ಕಿ.ಮೀ) ಹಾದು ಹೋಗಲಿದೆ. ಇದಕ್ಕಾಗಿ ರಾಜ್ಯದಲ್ಲೇ 5,205 ಹೆಕ್ಟೇರ್‌ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ದತ್ತಣ್ಣ, ಅವಿನಾಶ್, ಪತ್ರಕರ್ತ ಎಚ್ ಆರ್ ಶ್ರೀಶಾ ಸೇರಿ 67 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ,ನವೆಂಬರ್ 1ರಂದು ಸಾಧಕರಿಗೆ ಸನ್ಮಾನ

‘ವಾಹನಗಳು 120 ಕಿ.ಮೀ.ವೇಗದಲ್ಲಿ ಚಲಿಸುವಂತೆ ಈ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಉದ್ದೇಶಿತ ಹೆದ್ದಾರಿಯಿಂದಾಗಿ ಉಭಯ ನಗರಗಳ ನಡುವಣ ಪ್ರಯಾಣದ ಅವಧಿಯು 6 ಗಂಟೆಗಳಿಗೆ ತಗ್ಗಲಿದೆ. ಸದ್ಯ ಇರುವ ಬೆಂಗಳೂರು-ಪುಣೆ (ಎನ್‌ಎಚ್‌-4) ಹೆದ್ದಾರಿಯು ಒಟ್ಟು 783 ಕಿ.ಮೀ ಉದ್ದವಿದ್ದು, ಇದನ್ನು ಕ್ರಮಿಸಲು 14 ರಿಂದ 15 ಗಂಟೆ ಬೇಕಾಗುತ್ತದೆ’ ಎಂದು ಸಚಿವಾಲಯದ ಅಧಿಕಾರಿ ಹೇಳಿದ್ದಾರೆ.

ಬೆಂಗಳೂರಿಗೆ ಭೇಟಿ ನೀಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯೋಜನೆಯ ಸಂಬಂಧ ಲೋಕಸಭಾ ಸದಸ್ಯರು ಹಾಗೂ ಚುನಾಯಿತ ಪ್ರತಿನಿಧಿಗಳ ಜೊತೆ ಚರ್ಚಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!