September 27, 2022

Newsnap Kannada

The World at your finger tips!

murder,women,child

Praveen Bhatt acquitted to murder of Reena, two children: High Court #thenewsnap #murder #shockingnews #kannada #latestnews #belagavi #bengaluru

ಬೆಳಗಾವಿಯ ರೀನಾ, ಇಬ್ಬರು ಮಕ್ಕಳ ಕೊಲೆ ಆರೋಪಿ ಪ್ರವೀಣ್ ಭಟ್ ನಿರ್ದೋಷಿ : ಹೈಕೋರ್ಟ್

Spread the love

ಬೆಳಗಾವಿಯ ಕುವೆಂಪು ನಗರದಲ್ಲಿ 2015 ರ ಆಗಸ್ಟ್ ನಲ್ಲಿ ತಾಯಿ-ಇಬ್ಬರು ಮಕ್ಕಳ ತ್ರಿವಳಿ ಕಗ್ಗೊಲೆ ಪ್ರಕರಣದಲ್ಲಿ ಸ್ಯಾಕ್ಷಾಧಾರಗಳ ಕೊರತೆಯಿಂದ ಧಾರವಾಡ ಹೈಕೋರ್ಟ್ ಪೀಠ  ಆರೋಪಿಯನ್ನು ಖಲಾಸೆ ಮಾಡಿದೆ.

WhatsApp Image 2022 06 23 at 4.02.32 PM

ಇದನ್ನು ಓದಿ –ಮಂಡ್ಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ : ಎರಡು ದಿನ ಕಾಳಿಂಗನಹಳ್ಳಿ ಗ್ರಾಮ ವಾಸ್ತವ್ಯ ಅಂತ್ಯ

ಬೆಳಗಾವಿಯ ಕುವೆಂಪು ನಗರದಲ್ಲಿ 2015ರ ಆಗಸ್ಟ್ 16ರಂದು ನಸುಕಿನ ಜಾವ ತಾಯಿ, ಇಬ್ಬರು ಮಕ್ಕಳು ಸೇರಿ ಮೂವರ ಬರ್ಬರ ಹತ್ಯೆಯಾಗಿತ್ತು.

ಘಟನೆಯಲ್ಲಿ ರೀನಾ ಮಾಲಗತ್ತಿ, ಆದಿತ್ಯ ಮಾಲಗತ್ತಿ, ಸಾಹಿತ್ಯ ಮಾಲಗತ್ತಿ ಕೊಲೆಯಾಗಿತ್ತು. ಕೊಲೆಯಾದ 24 ಗಂಟೆಯಲ್ಲೇ ಆರೋಪಿ ಪ್ರವೀಣ್ ಭಟ್ ಎಂಬಾತನನ್ನು ಬಂಧಿಸಿದ್ದ ಬೆಳಗಾವಿ ಎಪಿಎಂಸಿ ಪೊಲೀಸರು ತನಿಖೆ ನಡೆಸಿ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ವಾದ ಆಲಿಸಿದ ಬೆಳಗಾವಿ ಕೋರ್ಟ್ 2018ರ ಏಪ್ರಿಲ್ 16ರಂದು ಪ್ರವೀಣ್ ಭಟ್‍ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಆ ಬಳಿಕ ತೀರ್ಪು ಪ್ರಶ್ನಿಸಿ ಆರೋಪಿ ಪರ ವಕೀಲರು ಹೈಕೊರ್ಟ್ ಮೆಟ್ಟಿಲೇರಿದ್ದರು.

ಈಗ ಧಾರವಾಡ ಹೈಕೋರ್ಟ್ ಪೀಠ  ಸಾಕ್ಷಿಗಳ ಕೊರತೆ ಹಿನ್ನೆಲೆ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ತೀರ್ಪು ನೀಡಿದೆ.

ತ್ರಿವಳಿ ಕೊಲೆಗೆ ರೀನಾ ಹಾಗೂ ಪ್ರವೀಣ್ ಭಟ್ ನಡುವಿನ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿತ್ತು. ಆರೋಪಿ ಪರವಾಗಿ ನ್ಯಾಯವಾದಿ ಪ್ರವೀಣ್ ಕರೋಶಿ ವಾದ ಮಂಡಿಸಿದ್ದಾರೆ.

error: Content is protected !!