ಮುಸ್ಲಿಮರೊಂದಿಗೆ ಸಹಬಾಳ್ವೆ ಅಸಾಧ್ಯ ಎಂದು ಅಂಬೇಡ್ಕರ್‌ ಹೇಳಿದ್ದರು : ಪ್ರತಾಪ್‌ ಸಿಂಹ

Team Newsnap
1 Min Read

ಮುಸ್ಲಿಮರದ್ದು ವಿಶ್ವ ಭ್ರಾತೃತ್ವ ಅಲ್ಲ, ಇಸ್ಲಾಂ ಭ್ರಾತೃತ್ವ ಎಂದು ಡಾ.ಬಿ.ಆರ್.ಅಂಬೇಡ್ಕರ್‌ ಬಹಳ ಹಿಂದೆಯೇ ಹೇಳಿದ್ದರು. ಅವರೊಟ್ಟಿಗೆ ಶಾಂತಿ, ಸಹಬಾಳ್ವೆಯಿಂದ ಬದುಕಲು ಸಾಧ್ಯವಿಲ್ಲ ಎಂದು ಸ್ವತಃ ಅಂಬೇಡ್ಕರ್ ತಮ್ಮ ‌ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆಂದು ಸಂಸದ ಪ್ರತಾಪ್‌ಸಿಂಹ ಹೇಳಿದರು

ಮೈಸೂರಿನಲ್ಲಿ ಸುದ್ದಿಗಾರರಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಎಲ್ಲರೂ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರೆ, ಮುಸಲ್ಮಾನರು ಕಿಲಾಫತ್‌ ಚಳವಳಿ ನಡೆಸುತ್ತಿದ್ದರು. ಆ ಮೂಲಕ ಖಲೀಫನ ಪರವಾಗಿ ಇದ್ದರು. ಇವರ (ಮುಸಲ್ಮಾನರು) ನಿಷ್ಠೆ ಭಾರತದ ಗಡಿಯಾಚೆಗಿದೆ ಎಂಬುದನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮೊದಲೇ ತಿಳಿಯಬೇಕಿತ್ತು ಎಂದರು.

ಆದರೆ ನಮ್ಮ ಅಂಬೇಡ್ಕರ್‌ ಒಬ್ಬರೇ ಈ ಸತ್ಯವನ್ನು ಅರಿತಿದ್ದರು. ಥಾಟ್ಸ್‌ ಆನ್ ಪಾಕಿಸ್ತಾನ್‌ ಪುಸ್ತಕದಲ್ಲಿ ಮುಸಲ್ಮಾನರು ಖಲೀಫನ ಪರವಾಗಿ ಹೋರಾಡುತ್ತಿದ್ದಾರಲ್ಲ. ಇವರ ಜೊತೆ ನಾವು ಒಟ್ಟಿಗೆ‌ ಶಾಂತಿ, ಸಹಬಾಳ್ವೆಯಿಂದ ಬದುಕಲು ಸಾಧ್ಯವಿಲ್ಲ ಅಂತ ಅಂಬೇಡ್ಕರರಿಗೆ ಅರ್ಥವಾಗಿತ್ತು ಎಂದು ತಿಳಿಸಿದ್ದಾರೆ.

ಅಂಬೇಡ್ಕರ್ ಅವರಿಗೆ ಹಿಂದೂಗಳ ಮನಸ್ಥಿತಿ ಗೊತ್ತಿತ್ತು. ಮಕ್ಕಳು ಹುಟ್ಟಿದ ತಕ್ಷಣ ಕುರಾನ್ ಬೈಬಲ್ ಕೊಡುತ್ತಾರೆ. ನಮ್ಮ ಮನೆಯಲ್ಲಿ ಮಗು ಹುಟ್ಟಿದಾಗ ಗಣಿತ, ವಿಜ್ಞಾನ, ಪುಸ್ತಕ ಕೊಡುತ್ತಾರೆ. ನಾವು ದಿನದಲ್ಲಿ 5 ದಿನ ಅಲ್ಲಾ ಒಬ್ಬನೇ ದೇವರು ಅಂತ ಹೇಳುವುದಿಲ್ಲ. ಆದರೆ ಅವರು ಅಲ್ಲಾ ಒಬ್ಬನೇ ದೇವರು ಏಸು ಒಬ್ಬನೇ ದೇವರು ಅಂತ ಬೋಧಿಸುತ್ತಾರೆ. ಇದರಿಂದ ಮಗು ಮುಂದೆ ಏನು ಕಲಿಯುತ್ತದೆ. ಎಷ್ಟೇ ವಿದ್ಯಾವಂತರಾದರೂ ಇದು ತಲೆಯಲ್ಲೇ ಇರುತ್ತದೆ. ನಮ್ಮ ಮಕ್ಕಳಿಗೆ ಈ ರೀತಿ ಹೇಳುವುದಿಲ್ಲ. ಇವರು ನಮಗೆ ಜಾತ್ಯಾತೀತೆಯ ಪಾಠ ಹೇಳುವ ಅವಶ್ಯಕತೆ ಇಲ್ಲ. ನಮ್ಮ ನಡುವಳಿಕೆಯಲ್ಲೇ ಜಾತ್ಯಾತೀತತೆ ಇದೆ. ಇದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಗೊತ್ತಿತ್ತು. ನಮ್ಮ ಧರ್ಮ ಒಬ್ಬ ವ್ಯಕ್ತಿಯ ಚಿಂತನೆಯಿಂದ ಬಂದಿರುವುದಿಲ್ಲ ಎಂದು ಹೇಳಿದ್ದಾರೆ.

Share This Article
Leave a comment