ಕುಂಕುಮ ಬಳೆ, ವಿಭೂತಿ ನಮ್ಮ ಸಂಸ್ಕೃತಿ ಪರಂಪರೆ. ಈ ಬಗ್ಗೆ ಮಾತನಾಡಿದ್ರೆ ನಾಲಿಗೆ ಸೀಳ್ತೀವಿ.
ಹೀಗೆಂದು ಎಚ್ಚರಿಕೆ ನೀಡಿದವರು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್.
ಬಾಗಲಕೋಟೆಯಲ್ಲಿ ಪ್ರಚೋದನಕಾರಿ ಹೇಳಿಕೆ ನಿಡಿರುವ ಮುತಾಲಿಕ್, ಹಿಜಾಬ್ ವಿವಾದ ಸಂಬಂಧ ಕುಂಕುಮ, ಬಳೆ ಬಗ್ಗೆ ಮುಸ್ಲಿಂ ವಿದ್ಯಾರ್ಥಿನಿಯರ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಇಂದು ಕುಂಕುಮ, ಭಸ್ಮ, ಬಳೆ ಬಗ್ಗೆ ಮಾತಾಡುವ ದಾಷ್ಟ್ರ್ಯ ಬೆಳೆದಿದೆ. ಕುಂಕುಮ, ಬಳೆ, ವಿಭೂತಿ ವೈಜ್ಞಾನಿಕವಾಗಿವೆ. ಇದು ಶೋ ಅಲ್ಲ, ಪ್ಯಾಷನ್ ಅಲ್ಲ, ಅಲಂಕಾರವಲ್ಲ. ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಇದೆ. ಈ ಬಗ್ಗೆ ಮಾತಾಡಿದರೆ ನಾಲಿಗೆ ಸೀಳಿ ಬಿಡುತ್ತೇವೆ ಹುಷಾರಾಗಿರಿ ಎಚ್ಚರಿಸಿದರು
ಅವು ಸಮವಸ್ತ್ರದ ಭಾಗಗಳಲ್ಲ. ಸಮವಸ್ತ್ರ ಅಂದರೆ ಬರೀ ಬಟ್ಟೆ. ಬಟ್ಟೆ ಬಗ್ಗೆ ಮಾತ್ರ ಮಾತಾಡಿ. ಗಣಪತಿ ಪೂಜೆ, ಸರಸ್ವತಿ ಪೂಜೆ, ಕುಂಕುಮ, ಬಳೆ ಬಗ್ಗೆ ಮಾತಾಡಿದರೆ ನಾಲಿಗೆ ಸೀಳಿ ಹಾಕುತ್ತೇವೆ ಎಂದರು
ಹಿಜಬ್ ಹಿಂದೆ ಇಸ್ಲಾಮೀಕರಣ ಇದೆ. ಬರೀ ಹಿಜಬ್ ಅಷ್ಟೇ ಅಲ್ಲ, ಈಗ ನೇರವಾಗಿ ಬುರ್ಕಾ ಹಾಕಿಕೊಂಡು ಬರುತ್ತಾರೆ. ಮುಂದೆ ನಮಾಜ್ ಮಾಡೋಕೆ ಅವಕಾಶ ಬೇಕು ಅಂತಾರೆ. ಒಂದೊಂದಾಗಿ ಮುನ್ನುಗ್ಗುವ ಪ್ರವೃತ್ತಿ ಇಸ್ಲಾಮ್ ಇತಿಹಾಸ ಹೇಳುತ್ತದೆ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು