‘ಶಬಾಷ್ ಬಡ್ಡಿ ಮಗನೆ’ಚಿತ್ರದ ನಿರ್ಮಾಪಕ ಪ್ರಕಾಶ್ ಬಂಧನ

Team Newsnap
1 Min Read

ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ನಿರ್ಮಾಪಕ ಪ್ರಕಾಶ್ ನನ್ನು ಅಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ನಟ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಶಬಾಷ್ ಬಡ್ಡಿ ಮಗನೇ ಸಿನಿಮಾದ ನಿರ್ಮಾಪಕ ಪ್ರಕಾಶ್ ಬಂಧಿಸಲಾಗಿದೆ.ಹೆಚ್​.ಡಿ.ಕೆ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ – ಸಿ.ಎಂ.ಇಬ್ರಾಹಿಂ

ಇದೀಗ ವಂಚನೆ ಕೇಸ್ ನಲ್ಲಿ ನಿರ್ಮಾಪಕ ಕೆಎಂಎಫ್ ನಲ್ಲಿ 20 ಲಕ್ಷಕ್ಕೆ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಚಿಕ್ಕಬಳ್ಳಾಪುರ ಮೂಲದ ಚರಣ್ ಎಂಬುವವರಿಂದ ಮುಂಗಡವಾಗಿ 10 ಲಕ್ಷ ಹಣ ಪಡೆದಿದ್ದರು.

ಕಳೆದ ಡಿಸೆಂಬರ್ ನಲ್ಲಿ ಕೆಎಂಎಫ್ ನಲ್ಲಿ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆ ನಡೆದಿತ್ತು. ಕೆಎಂಎಫ್ ನಿರ್ದೇಶಕರ ಸರ್ಕಾರಿ ಲಾಂಛನ ನಕಲು ಮಾಡಿ ಈತ ಹುದ್ದೆಯ ಆದೇಶದ ಪ್ರತಿ ನೀಡುತ್ತಿದ್ದನು. ಸದ್ಯ ಚರಣ್ ನೀಡಿದ ದೂರಿನ ಮೇರೆಗೆ ಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

Share This Article
Leave a comment