December 29, 2024

Newsnap Kannada

The World at your finger tips!

hotel rajesh

ಪವರ್​ಸ್ಟಾರ್​ ಪುನೀತ್ ಹಠಾತ್ ನಿಧನ: ಮಂಡ್ಯದಲ್ಲಿ ಮತ್ತೊಬ್ಬ ಅಭಿಮಾನಿ ಸಾವು

Spread the love

ಪವರ್​ಸ್ಟಾರ್​ ಪುನೀತ್ ಹಠಾತ್ ನಿಧನದ ಆಘಾತಕ್ಕೆ ಮತ್ತೊಬ್ಬ ಅಭಿಮಾನಿ ಸಾವನ್ನಪ್ಪಿದ್ದಾನೆ. ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದ ಕೆ.ಎಂ.ರಾಜೇಶ್ (50) ಮೃತಪಟ್ಟ ಅಭಿಮಾನಿ.

ಮೃತ ರಾಜೇಶ್ ಅಪ್ಪುವಿನ​ ಅಪ್ಪಟ ಅಭಿಮಾನಿಯಾಗಿದ್ದು ಪುನೀತ್ ನಿಧನದ ಬಳಿಕ ಸರಿಯಾಗಿ ಊಟ, ಉಪಹಾರ ತ್ಯಜಿಸಿದ್ದನಂತೆ. ನಿನ್ನೆ ಅಪ್ಪು ಅಂತಿಮ ದರ್ಶನಕ್ಕೆ ಹೋಗುವುದಾಗಿ ಮನೆ ಬಿಟ್ಟಿದ್ದ ರಾಜೇಶ್ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ ಸುಸ್ತಾಗಿ ಬಿದ್ದಿದ್ದರು.

ಈ ವೇಳೆ ರಸ್ತೆಯಲ್ಲಿ ಬಿದ್ದಿದ್ದ ರಾಜೇಶ್ ರನ್ನು ಪರಿಚಯಸ್ಥರು ನೋಡಿ ಮನೆಗೆ ಕರೆದುಕೊಂಡು ಹೋಗಿ ವೈದ್ಯರಿಂದ ಚಿಕಿತ್ಸೆಯನ್ನೂ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಅಭಿಮಾನಿ ಕೊನೆಯುಸಿರೆಳೆದಿದ್ದಾನೆ.

hotel rajesh1

ಈ ಮೂಲಕ ಮಂಡ್ಯದಲ್ಲಿ ಪುನೀತ್​ ಅಭಿಮಾನಿಗಳ ಸಾವಿನ ಸಂಖ್ಯೆ ಎರಡಕ್ಕೇರಿದೆ. ಇನ್ನು ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿಯಾಗಿದ್ದ ರಾಜೇಶ್ ಅಣ್ಣಾವ್ರ ಮೇಲಿನ ಅಪಾರ ಅಭಿಮಾನದಿಂದ ತಮ್ಮ ಹೋಟೆಲ್​ಗೆ ಡಾ.ರಾಜ್ ಕುಮಾರ್ ಹೋಟೆಲ್​ ಎಂದು ಹೆಸರಿಟ್ಟಿದ್ದರು..

Copyright © All rights reserved Newsnap | Newsever by AF themes.
error: Content is protected !!