November 16, 2024

Newsnap Kannada

The World at your finger tips!

train ,railway,india

ವಿದ್ಯುತ್‌ ಸಮಸ್ಯೆ – 650ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರ ರದ್ದು

Spread the love

ಈ ವರ್ಷದ ಬೇಸಿಗೆ ವೇಳೆ ವಿದ್ಯುತ್‌ ಬಿಕ್ಕಟ್ಟನ್ನು ಪರಿಹರಿಸಲು ಭಾರತೀಯ ರೈಲ್ವೇ ದೇಶಾದ್ಯಂತ 650 ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.

ಕಲ್ಲಿದ್ದಲು ಹೊತ್ತ ರೈಲುಗಳ ಸಾಗಾಟ ಸುಗಮವಾಗಿಸಲು ತಾತ್ಕಾಲಿಕವಾಗಿ ಕೆಲ ಪ್ರಯಾಣಿಕರ ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೇ ರದ್ದುಗೊಳಿಸಿದೆ. ರದ್ದುಗೊಳಿಸದೇ ಇರುವ ರೈಲುಗಳ ಸಂಚಾರದಲ್ಲೂ ಕೂಡ ವ್ಯತ್ಯಯವಾಗಲಿದೆ.

ದೇಶಾದ್ಯಂತ ವಿದ್ಯುತ್‌ ಬೇಡಿಕೆ ತೀವ್ರಗೊಂಡಿದೆ ಕಲ್ಲಿದ್ದಲು ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರೈಲ್ವೇಯು ಕಲ್ಲಿದ್ದಲು ಸಾಗಿಸುವ ರೇಕ್‌ಗಳು ವಿದ್ಯುತ್ ಸ್ಥಾವರಗಳನ್ನು ವೇಗವಾಗಿ ತಲುಪಲು ಕಳೆದ ಎರಡು ವಾರಗಳಲ್ಲಿ ಪ್ರತಿದಿನ ಸುಮಾರು 16 ಮೇಲ್/ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ರದ್ದು ಮಾಡಿದೆ.

ರೈಲ್ವೇ ಸಚಿವಾಲಯವು ಮೇ 24 ರವರೆಗೆ ಸುಮಾರು 657 ಟ್ರಿಪ್‌ಗಳ ಮೇಲ್ ಮತ್ತು ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸುವಂತೆ ಸೂಚಿಸಿದೆ.

ಪ್ರತಿದಿನ ಕಲ್ಲಿದ್ದಲು ರೇಕ್‌ಗಳ ಸರಾಸರಿ ಲೋಡಿಂಗ್ 400ಗಿಂತಲೂ ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲೇ ಅತ್ಯಧಿಕ ಎಂದು ವರದಿಯಾಗಿದೆ.

ಕಲ್ಲಿದ್ದಲು ಸಚಿವಾಲಯವು ಪ್ರಸ್ತುತ ವಿದ್ಯುತ್‌ ಬೇಡಿಕೆಯನ್ನು ಪೂರೈಸಲು ಪ್ರತಿದಿನ 422 ಕಲ್ಲಿದ್ದಲು ರೇಕ್‌ಗಳನ್ನು ಓಡಿಸುವಂತೆ ರೈಲ್ವೆಗೆ ಮನವಿ ಮಾಡಿದೆ. ಆದರೆ ರೈಲ್ವೇ ಪ್ರತಿದಿನ 415 ಕಲ್ಲಿದ್ದಲು ರೇಕ್‌ಗಳನ್ನು ನೀಡುವುದಾಗಿ ಒಪ್ಪಿಕೊಂಡಿತ್ತು. ಆದರೆ ಈಗ ಪ್ರತಿದಿನ 410 ರೇಕ್‌ಗಳು ಮಾತ್ರ ಸಂಚರಿಸುತ್ತಿದೆ.

ಪ್ರತಿ ರೇಕ್ ಸುಮಾರು 3,500 ಟನ್ ಕಲ್ಲಿದ್ದಲನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲಿನ ವಿದ್ಯುತ್ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಸುಧಾರಿಸಲು ಮುಂದಿನ ಎರಡು ತಿಂಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

Copyright © All rights reserved Newsnap | Newsever by AF themes.
error: Content is protected !!