ನಾನು ಈಗ ನೀರುಗಂಟಿ – ಭಡ್ತಿಗೆ SSLC ಪಾಸ್ ಆಗ್ಲೇ ಬೇಕು, ಪಾಸ್ ಮಾಡಿಕೊಡಿ – ಮೌಲ್ಯಮಾಪಕರಿಗೆ ಪತ್ರ

Team Newsnap
1 Min Read

ಸಾರ್, ನಾನು ಈಗ ಗ್ರಾಮ ಪಂಚಾಯ್ತಿಯಲ್ಲಿ ನೀರು ಗಂಟಿಯಾಗಿ ಕೆಲಸ ಮಾಡುತ್ತಿದ್ದೇನೆ. SSLC ಯಲ್ಲಿ ಪಾಸ್ ಆದರೆ ನಂಗೆ ಬಿಲ್ ಕಲೆಕ್ಟ್ರರ್ ಆಗಿ ಬಡ್ತಿ ಸಿಗುತ್ತೆ . ಪ್ಲೀಸ್ ನನ್ನನ್ನು ಪಾಸ್ ಮಾಡಿ ನಿಮಗೆ, ನಿಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತೆ.

  • ಹೀಗೆಂದು ವಿಜಯಪುರದ ಸ್ನೇಹ ಸಂಗಮ ಆಂಗ್ಲ ಶಾಲೆಯಲ್ಲಿ ನಡೆಯುತ್ತಿರುವ SSLC ಪರೀಕ್ಷೆ ಮೌಲ್ಯ ಮಾಪನ ನಡೆಯುತ್ತಿರುವ ವೇಳೆಯಲ್ಲಿ ಮೌಲ್ಯ ಮಾಪಕರಿಗೆ ಉತ್ತರ ಪತ್ರಿಕೆಯ ಜೊತೆಯಲ್ಲೇ
    ಇಂತಹ ಒಕ್ಕಣಿಕೆಯ ಪತ್ರ ಬರೆದದ್ದು SSLC ವಿದ್ಯಾರ್ಥಿ.

ನಾನು 10 ವರ್ಷದಿಂದಲೂ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದೇನೆ. SSLC ಆಗಿಲ್ಲ ಅಂತ ಭಡ್ತಿ ಕೊಟ್ಟಿಲ್ಲ ಈಗ ಭಡ್ತಿ ಸಿಗುವ ಅವಕಾಶವಿದೆ. ಇದೊಂದೇ ಪೇಪರ್ ಪಾಸ್ ಆಗಬೇಕಾಗಿದೆ. ಇದು ಪಾಸ್ ನೀವು ನನಗೆ ಬದುಕು ಕೊಟ್ಟಂತೆ ಆಗುತ್ತದೆ ಎಂದು ತನ್ನ ಕರುಣಾಜನಕ ಕಥೆ ಬರೆದು ಮೌಲ್ಯ ಮಾಪಕರೇ ಹೌಹಾರುವಂತೆ ಪತ್ರ ಬರೆದಿದ್ದಾನೆ.

ಆ ವಿದ್ಯಾರ್ಥಿ ಬರೆದ ಪತ್ರ ಈಗ ರಾಜ್ಯಾದ್ಯಂತ ವೈರಲ್ ಆಗಿದೆ.

water latter 1
Share This Article
Leave a comment