January 27, 2026

Newsnap Kannada

The World at your finger tips!

women achiovement

“ಸ್ತ್ರೀ ಶಕ್ತಿ” 

Spread the love

 ಹೇಗಿದ್ದೀರಾ ಸರ್, ಇವತ್ತು ನೀವು ಮನೆಗೆ ಹೋಗಬಹುದು ಎಂದು ಹೇಳಿ ಡಾಕ್ಟರ್ ಪಕ್ಕದ‌ ಬೆಡ್ ಗೆ ಹೋದರು. 

ಡಾಕ್ಟರನ್ನು ನೋಡುತ್ತಾ ಹಳೆಯ ನೆನಪು ಮೂಡಿತು. 

ಅಂದು ತನ್ನ ಹನ್ನೆರಡು ವರ್ಷದ ಮಗ ಹುಡುಗಿಯಂತೆ ಬಳೆ ಸರ ಹಾಕಿಕೊಂಡು ಖುಷಿ ಪಡುವುದು ಕಂಡು ಭಯವಾಯಿತು. ಮನೆ ಮರ್ಯಾದೆ ಹೋಗುತ್ತದೆ ಎಂದು ಅವನನ್ನು ಮನೆ ಬಿಟ್ಟು ಹೋಗಲು ಹೇಳಿದೆ. ಅಲ್ಲೇ ಅಳುತ್ತಿದ್ದ ಹೆಂಡತಿ, ಮಗನನ್ನು ಮನೆ ಬಿಟ್ಟು ಕಳುಹಿಸಿದರೆ ನಾನು ಅವನ ಜೊತೆ ಹೋಗುತ್ತೇನೆ ಎಂದಾಗ ತಾನು ಕಲ್ಲಾಗಿದ್ದ. 

ಹೆಣ್ಣು ಹೆಂಗಸು ನಿನ್ನ ಹತ್ತಿರ ಏನೂ ಮಾಡಲು ಸಾಧ್ಯ ಅವನ ಜೊತೆ ನೀನು ಭಿಕ್ಷೆ ಎತ್ತಿ ಬದುಕಬೇಕು ಎಂದಿದ್ದ. 

ಇಂದು ಅದೇ ಸ್ತ್ರೀ ಶಕ್ತಿ  ತಾನು ಹೆತ್ತ  ಜೀವವನ್ನು ನೂರಾರು ಜನರ ಜೀವ ಉಳಿಸುವಂತಹವಳನ್ನಾಗಿ ಬೆಳೆಸಿದ್ದಾಳೆ…ತನ್ನಿಂದ ಆದ ತಪ್ಪಿಗಾಗಿ ಕಣ್ಣಲ್ಲಿ ನೀರು ತುಂಬಿ ಕೊಂಡ.

Savita ramesh

ಸವಿತಾ ರಮೇಶ 

error: Content is protected !!