ಕಳೆದ 4 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಪೂಜಾ ಕರೋನಾಗೆ ಬಲಿ

Team Newsnap
0 Min Read

ಕಳೆದ ನಾಲ್ಕು ದಿನಗಳ ಹಿಂದೆ‌ಯಷ್ಟೇ ಮದುವೆಯಾಗಿದ್ದ ವಿವಾಹಿತೆ ಕೊರೊನಾಗೆ ಬಲಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮಲವಗೊಪ್ಪದ ನವವಧು ಪೂಜಾ ಕೋವಿಡ್​ಗೆ ಬಲಿಯಾದವರು.

ಪೂಜಾ ವಿವಾಹ ಮೇ 24 ರಂದು ಹರಿಗೆಯ ಮಹೇಶ್ ಅವರೊಂದಿಗೆ ನಡೆದಿತ್ತು. ಮದುವೆಯ ಮರು ದಿನದಿಂದಲೇ ಪೂಜಾಗೆ ಸ್ವಲ್ಪ ಜ್ವರ ಕಾಣಿಸಿಕೊ‌ಂಡಿತ್ತು ಎನ್ನಲಾಗಿದೆ.

ಆದರೆ ಸ್ಥಳೀಯ ಕ್ಲಿನಿಕ್​ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಪೂಜಾಗೆ, ಇಂದು ಜ್ವರ ಜಾಸ್ತಿಯಾದ ಹಿನ್ನೆಲೆಯಲ್ಲಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.

ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.

Share This Article
Leave a comment