May 22, 2022

Newsnap Kannada

The World at your finger tips!

police

ಬೆಂಗಳೂರಿನ ಬಳಿ ನಕಲಿ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ- ವ್ಯಕ್ತಿಯ ಬಂಧನ

Spread the love

ಮೈಸೂರಿನ ನಂತರ ಇದೀಗ ಬೆಂಗಳೂರಿನಲ್ಲೂ ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಶುದ್ಧ ನಂದಿನ ಬ್ರಾಂಡ್‌ನ ಲೇಬಲ್ ಹಾಕಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. 

ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ವ್ಯಾಪ್ತಿಯ ಬೈಯಂಡಳ್ಳಿಯಲ್ಲಿ ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಬಾಬುಲಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಬುಲಾಲ್ ಈ ಹಿಂದೆ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ ಮಾಡಿ, ನಷ್ಟ ಅನುಭವಿಸಿದ್ದ. ಬಳಿಕ ತುಪ್ಪದ ದಂಧೆ ಪ್ರಾರಂಭಿಸಿದ್ದ. ಪೊಲೀಸರು ದಾಳಿ ನಡೆಸಿದಾಗ 15 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತು ಹಾಗೂ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!