June 9, 2023

Newsnap Kannada

The World at your finger tips!

WhatsApp Image 2022 12 29 at 3.37.20 PM 1

ಚಳುವಳಿ ನಿರತ ರೈತರ ಮೇಲೆ ಪೋಲಿಸ್ ದೌರ್ಜನ್ಯ: ಸರ್ಕಾರದ ವಿರುದ್ದ ಭರತ್ ರಾಜ್ ಕಿಡಿ

Spread the love
  • ಪೊಲೀಸ್ ಇಲಾಖೆಯ ಸಂವಿಧಾನ ಬದ್ದವಾಗಿ ಕಾರ್ಯ ನಿರ್ವಹಣೆಗೆ ಪ್ರಾಂತ ರೈತ ಸಂಘ ಒತ್ತಾಯ

ಟನ್ ಕಬ್ಬಿಗೆ 5,000 ರೂ ಲೀಟರ್ ಹಾಲಿಗೆ ಕನಿಷ್ಠ 40ರೂ ಬೆಲೆ ನಿಗದಿಪಡಿಸಬೇಕೆಂದು ಕಳೆದ 52 ದಿನಗಳಿಂದ ಹಗಲು ರಾತ್ರಿ ಹೋರಾಟ ನಡೆಸುತ್ತಿರುವ ರೈತರನ್ನು ಬಂಧಿಸಿ ಮತ್ತು ಅವರ ಟೆಂಟ್ ಅನ್ನು ಕಿತ್ತೆಸದಿರುವ ಪೊಲೀಸ್ ರ ದೌರ್ಜನ್ಯ ವನ್ನ ಕರ್ನಾಟಕ ಪ್ರಾಂತ ರೈತ ಸಂಘ ಖಂಡಿಸುತ್ತದೆ ಪೊಲೀಸ್ ಇಲಾಖೆ ಆಳುವ ಸರ್ಕಾರದ ಅಡಿಯಾಳಾಗಿ ಕೆಲಸ ಮಾಡದೆ ಸಂವಿಧಾನದತ್ತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಒತ್ತಾಯಿಸಿದರು.

ಮಳವಳ್ಳಿ ಯಲ್ಲಿ ಗುರುವಾರ ನಡೆದ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ನೀತಿಗೆಟ್ಟ ರಾಜ್ಯ ಹಾಗೂ ಕೇಂದ್ರ ಸರ್ಕಾರ ಚುನಾವಣೆಗೆ ಮುನ್ನ ದೇಶದ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸದೆ ವಂಚನೆ ಮಾಡಿದೆ ಎಂದರು.

ರೈತರ ಆದಾಯ ದ್ವಿಗುಣ ಗೊಳಿಸಿ ಡಾ.ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ತಗಲುವ ಖರ್ಚಿನ ಜೊತೆಗೆ ಶೇ.50.ರಷ್ಟು. ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸುತ್ತೇನೆ ಎಂದು ಭರವಸೆ ನೀಡಿತ್ತು ಹಾಗೂ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ .ರೈತರ ಆತ್ಮಹತ್ಯೆಯನ್ನು ತಡೆಗಟ್ಟುತ್ತುನೆಂದು ಹೇಳಿತ್ತು ಆದರೆ ರೈತ ವಿರೋಧಿ ವಿದ್ಯುತ್ ಮಸೂದೆ.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ . ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿದೆ ಹಾಗಾಗಿ ಬಿಜೆಪಿಯ ನಯ ವಂಚಕರನ್ನು ಜೈಲಿಗೆ ಹಾಕುವುದರ ಬದಲು ಬೆವರ ಬಸಿದು ಅನ್ನ ನೀಡುವ ರೈತರ ಮೇಲೆ ದೌರ್ಜನ್ಯ ನಡೆಸಿದ ಘಟನೆಯನ್ನು ಖಂಡಿಸಬೇಕೆಂದರು.

ಚಳುವಳಿಯ ಟೆಂಟ್ ನಲ್ಲಿ ಮಹಾತ್ಮರ ಪೋಟೋ ಗಳಿಗೆ ಅಪಮಾನ ಮಾಡಿ ಅವುಗಳನ್ನ ಬಿಸಾಡಿ ಅಗೌರವ ತೋರಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸ ಬೇಕೆಂದು ಆಗ್ರಹಿಸುತ್ತೆವೆ.

ಕಾರ್ಪೊರೇಟ್ ಕಂಪನಿ ಕುಳಗಳಾದ ಆದಾನಿ . ಅಂಬಾನಿ ಮನೆಯ ಅಡಿಯಾಳದ ಅಮಿತ್ ಶಾ ಮಂಡ್ಯಕ್ಕೆ ಭೇಟಿ ನೀಡುತ್ತಿರುವುದರಿಂದ ಅವರ ಅಣತೆಯಂತೆ ರೈತ ಚಳುವಳಿಯನ್ನು ಹತ್ತಿಕ್ಕಲು ಹೊರಟಿದ್ದಾರೆ ದೆಹಲಿಯ ರೈತ ಚಳುವಳಿಯ ಮುಂದೆ ಮಂಡಿಯೂರಿದ ನರೇಂದ್ರ ಮೋದಿ. ಅಮಿತ್ ಶಾ ಬುದ್ದಿ ಕಲಿತಂತಿಲ್ಲ. ಇವರಿಗೆ ದೇಶದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಜನತಾದಳದವರು ಅಧಿವೇಶನದಲ್ಲಿ ರೈತರ ಸಂಕಷ್ಟಗಳ ಬಗ್ಗೆ ಚರ್ಚೆ ನಡೆಸದೆ ಅನಾಗತ್ಯ ವಿಚಾರಕ್ಕೆ ಒತ್ತು ನೀಡುತ್ತಿದ್ದಾರೆ . ಜಿಲ್ಲೆಯಲ್ಲಿ ಮತ್ತೊಂದು ಕೆಟ್ಟ ಪರಂಪರೆ ಮುಂದುವರೆದಿದೆ.
ಜನರ ಸಂಕಷ್ಟಗಳಿಗೆ ಆಳುವ ಸರ್ಕಾರಗಳ ನೀತಿಗಳು ಕಾರಣ ಎಂಬುವುದನ್ನ ಜನತೆ ಮುಂದೆ ತಿಳಿಸಿ ಅವುಗಳು ಇತ್ಯರ್ಥಕ್ಕೆ ಹೋರಾಟವೆ ದಾರಿ ಎಂಬುದನ್ನ ಮರೆಮಾಚಿಸಿ ಅಮಾಯಕ ಜನರನ್ನ ದೇವಸ್ಥಾನಗಳ ಯಾತ್ರೆಗೆ ಎಲ್ಲಾ ಪಕ್ಷದವರು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಜನರನ್ನ ದಿಕ್ಕು ತಪ್ಪಿಸಿ ಆಳುವ ಸರ್ಕಾರದ ಮೇಲೆ ಜನರಿಗೆ ಬರಬೇಕಾದ ಸಿಟ್ಟನ್ನು ಶಮನ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು

ರೈತರು ಕೂಲಿಕಾರರ ಕಾರ್ಮಿಕರು ಮಹಿಳೆಯರೆಲ್ಲರು ತಮ್ಮ ಸಂಕೋಲೆಗಳಿಂದ ಹೊರಬರಲು ಸಂಘಟಿತ ಹೋರಾಟ ಒಂದೆ ದಾರಿ ಅದಕ್ಕಾಗಿ ಮುಂದಾಗಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ ಜಿ ರಾಮಕೃಷ್ಣ ಎ ಎಲ್ ಶಿವಕುಮಾರ್ ಗುರುಸ್ವಾಮಿ ಆನಂದ್ ಎಸ್.ಕೆ ಶಿವಕುಮಾರ್ ತಿಮ್ಮೇಗೌಡ. .ಮರಿಲಿಂಗೇಗೌಡ. ಸಾಗ್ಯ ರಾಜು ಪ್ರಕಾಶ್ ಮೂರ್ತಿ. ಹಿಪ್ಜುಲ್ಲಾ. ಚಿಕ್ಕಸ್ವಾಮಿ. ಗಣೇಶ್ ಸಿದ್ದರಾಜ್ ರಾಜೇಶ್ ಮಹಾದೇವು. ಪ್ರದೀಪ್ ಮುಂತಾದವರು ಭಾಗವಹಿಸಿದ್ದರು.

error: Content is protected !!