September 21, 2021

Newsnap Kannada

The World at your finger tips!

ಪೊಲೀಸರ ಕಾರ್ಯಚರಣೆ: ಜಗ್ಗೇಶ್ ಬಹುಮಾನ ಘೋಷಣೆ

Spread the love

ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಹಿರಿಯ ನಟ ಜಗ್ಗೇಶ್ ಒಂದು ಲಕ್ಷರೂ. ಬಹುಮಾನ ಘೋಷಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ “ನವರಸನಾಯಕ’ ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಆತ್ಯಾಚಾರ ಮಾಡಿದ ಕಾಮಪಿಪಾಸುಗಳನ್ನು ಬಂಧಿಸಿರುವ ನನ್ನ ಕರುನಾಡಿನ ಹೆಮ್ಮೆಯ ಆರಕ್ಷಕರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು.

ಆ್ಯಮ್ ಪ್ರೌಡ್ ಆಫ್ ಮೈ ಸ್ಟೇಟ್ ಪೊಲೀಸ್. ಪ್ರಕರಣ ಭೇದಿಸಿದ ನಲ್ಮೆಯ ಪೊಲೀಸರಿಗೆ ನನ್ನ ಕಡೆಯಿಂದ ಒಂದು ಲಕ್ಷ ರೂ. ಬಹುಮಾನ. ನಿಮ್ಮ ಸಾರ್ಥಕ ಸೇವೆ ಹೀಗೆ ಮುಂದುವರಿಯಲಿ!ರಾಷ್ಟ್ರಕ್ಕೆಕ್ಕೆ ಮಾದರಿ ನಮ್ಮ ಪೊಲೀಸ್, ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!