May 20, 2022

Newsnap Kannada

The World at your finger tips!

modi student

ಉಕ್ರೇನ್​​ನಿಂದ ವಾಪಸ್ಸಾದ ಭಾರತೀಯ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ

Spread the love

ಉಕ್ರೇನ್​​ನಲ್ಲಿ ಸಿಲುಕಿರುವ ಭಾರತ ತನ್ನ ಪ್ರಜೆಗಳ ಸ್ಥಳಾಂತರ ಕಾರ್ಯವನ್ನು ಚುರುಕುಗೊಳಿಸಿದೆ. ಆಪರೇಷನ್​ ಗಂಗಾ ಹೆಸರಿನಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಇದುವರೆಗೂ 18 ಸಾವಿರ ವಿದ್ಯಾರ್ಥಿಗಳನ್ನು ಭಾರತಕ್ಕೆ ಏರ್​ಲಿಫ್ಟ್ ಮಾಡಲಾಗಿದೆ.

ಬಹುತೇಕ ವಿದ್ಯಾರ್ಥಿಗಳನ್ನು ದೆಹಲಿಗೆ ಕರೆತಂದು ಆ ಬಳಿಕ ಆಯಾ ರಾಜ್ಯಗಳಿಗೆ ಅವರನ್ನು ಕಳುಹಿಸಿಕೊಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.

ಇಂದು ಉಕ್ರೇನ್​​ನಿಂದ ಕರೆತರಲಾಗಿದ್ದ ವಾರಣಾಸಿ ಹಾಗೂ ಉತ್ತರ ಪ್ರದೇಶದ ವಿದ್ಯಾರ್ಥಿಗಳನ್ನು ಪ್ರಧಾನಿ ಮೋದಿ ಅವರು ಭೇಟಿ ಮಾಡಿ, ಉಕ್ರೇನ್​ ಸ್ಥಿತಿ ಹಾಗೂ ಸರ್ಕಾರದ ಕಾರ್ಯಾಚರಣೆ ಕುರಿತಂತೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು.

ಇಂದು ಪ್ರಧಾನಿ ಮೋದಿ ಕ್ವಾಡ್​​ ಮೀಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಯುಎಸ್ ರಾಷ್ಟ್ರಗಳ ಮುಖ್ಯಸ್ಥರು ​ ಬಿಕ್ರೇನ್​​ ಬಿಕ್ಕಟ್ಟು ಕುರಿತು ಚರ್ಚಿಸಲು ವರ್ಚುವಲ್​​ ಸಭೆ ನಡೆಸಲಿದೆ ಎನ್ನಲಾಗಿದೆ.

error: Content is protected !!