ವಿಶ್ವದಲ್ಲೇ ಅತ್ಯಂತ ಪ್ರಗತಿ‌ ರಾಷ್ಟ್ರವಾಗಿ ಹೊರ ಹೊಮ್ಮಿಸುವ ಸಂಕಲ್ಪ – ಪ್ರಧಾನಿ‌ ಮೋದಿ

Team Newsnap
1 Min Read

ಭಾರತ ಮುಂದಿನ‌ 25 ವರ್ಷಗಳಲ್ಲಿ ಎಲ್ಲಾ ಸೌಲಭ್ಯ ಗಳನ್ನು ಒಳಗೊಂಡು ವಿಶ್ವದಲ್ಲೇ ಅತ್ಯಂತ ಪ್ರಗತಿ‌ ರಾಷ್ಟ್ರವಾಗಿ ಹೊರ ಹೊಮ್ಮಿಸುವ ಸಂಕಲ್ಪ ಮಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸದಿಂದ ಹೇಳಿದರು.

ನವ ದೆಹಲಿಯಲ್ಲಿ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಗೆ ಪ್ರಧಾನಿ ಮೋದಿ ಧ್ವಜಾರೋಹಣ ನಡೆಸುವ ಮೂಲಕ ಚಾಲನೆ ನೀಡಿದರು.

ದ್ವಜಾರೋಹಣದ ಬಳಿಕ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿ ಮಾತನಾಡಿದ ಮೋದಿ ಅವರು, ಕೊರೊನಾ ಸಂಕಷ್ಟ ಸಂದರ್ಭದಲ್ಲಿ ನಾಡಿನ ಜನತೆಯ ಹೋರಾಟ, ದೇಶದ ಅತೀ ದೊಡ್ಡ ಲಸಿಕಾ ಅಭಿಯಾನ ಹಾಗೂ ಒಲಂಪಿಕ್ಸ್​ ನಲ್ಲಿ ಯುವ ಕ್ರೀಡಾಪಟುಗಳು ಮಾಡಿದ ಸಾಧನೆಯ ಕುರಿತು ಪ್ರಸ್ತಾಪ ಮಾಡಿ ಮೆಚ್ಚುಗೆ ಸೂಚಿಸಿದರು.

ದೇಶದ 54 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇದು ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನವಾಗಿದೆ ಎಂದರು.‌

ಮೊದಲಿಗಿಂತ ಈಗ ಸರ್ಕಾರ ಯೋಜನೆಗಳ ವೇಗ ಹೆಚ್ಚಿದೆ. ಪಿಂಚಣಿ ಯೋಜನೆ, ವಸತಿ ಯೋಜನೆ, ಆಯುಷ್ಮಾನ್​ ಕಾರ್ಡ್​, ಉಜ್ವಲ, ವಿಮಾ ಯೋಜನೆ ದೇಶದ ಜನತೆಗೆ ತಲುಪಿದೆ ಎಂದು ಹೇಳಿದರು.

2 ವರ್ಷದಲ್ಲಿ 4.5 ಕೋಟಿ ಮನೆಗಳಿಗೆ ಕುಡಿಯುವ ನೀರು ತಲುಪಿದೆ. ವೈದ್ಯಕೀಯ ಶಿಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ.. ಮೆಡಿಕಲ್ ಸೀಟ್​ಗಳನ್ನು ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೂ ಸಿದ್ಧತೆ ನಡೆಸಲಾಗಿದೆ. ಲಡಾಖ್​ನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ವೇಗವಾಗಿ ನಡೆಯುತ್ತಿದೆ ಎಂದರು.

ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತಿದ್ದು.ಹೃದಯ ಮೂಲಕವೂ ಈಶಾನ್ಯ ರಾಜ್ಯಗಳೊಂದಿಗೆ ಸಂಬಂಧ ಬೆಸೆಯಲಾಗುತ್ತಿದೆ ಎಂದು ತಿಳಿಸಿದರು.

Share This Article
Leave a comment