ಪ್ರಧಾನಿ ಮೋದಿ ಒರಟು ಮನುಷ್ಯ ಅಲ್ಲ : ಆಜಾದ್‌ ರಿಂದ ಅಚ್ಚರಿ ಹೇಳಿಕೆ

Team Newsnap
1 Min Read

ಮೋದಿಯವರಿಗೆ ಮಕ್ಕಳು ಅಥವಾ ಸ್ವಂತ ಕುಟುಂಬವಿಲ್ಲದ ಕಾರಣ ನಾನು ಅವರನ್ನ ಒರಟು ಮನುಷ್ಯನೆಂದು ಭಾವಿಸಿದ್ದೆ. ಆದರೆ ಮೋದಿ ಕನಿಷ್ಠ ಮಾನವೀಯತೆಯನ್ನು ತೋರಿಸಿದ್ದಾರೆ ಎಂದು ಗುಲಾಂ ನಬಿ ಆಜಾದ್ ಮೋದಿಯನ್ನು ಹಾಡಿ ಹೊಗಳಿದ್ದಾರೆ.

ರಾಜ್ಯ ಸಭೆಯಲ್ಲಿ ಗುಲಾಂ ನಬಿ ಆಜಾದ್‌ಗೆ ಬೀಳ್ಕೊಡುಗೆ ವೇಳೆ ಪ್ರಧಾನ ಮೋದಿ ಭಾವುಕರಾಗಿದ್ದರು.

ಕಾಶ್ಮೀರದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯನ್ನು ಮೋದಿ ಸ್ಮರಿಸಿದ್ದರು. ಇದನ್ನು ನೆನಪಿಸಿಕೊಂಡ ಆಜಾದ್ ಪ್ರಧಾನಿ ಮೋದಿಯವರು ಮಾನವೀಯತೆಯುಳ್ಳ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

ಮೋದಿ ಅವರೊಂದಿಗೆ ನಡೆದ ಘಟನೆಯೊಂದನ್ನು ಆಜಾದ್ ಸ್ಮರಿಸಿಕೊಂಡಿದ್ದಾರೆ. ಆಯನ ಭಾಷಣವನ್ನು ಒಮ್ಮೆ ನೋಡಿ. ವಿದಾಯ ಹೇಳೋ ಸಂದರ್ಭದಲ್ಲಿ ಒಂದು ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

2006ರಲ್ಲಿ ನಾನು ಜಮ್ಮು ಕಾಶ್ಮೀರದ ಸಿಎಂ ಆಗಿದ್ದೆ. ಆ ವೇಳೆ ಗ್ರೇನೆಡ್​ ದಾಳಿಯಲ್ಲಿ ಗುಜರಾತ್​​ಗೆ ಸೇರಿದ ಜನರು ಸಾವನ್ನಪ್ಪಿದ್ದರು. ಆ ಘಟನೆಯ ಮೇಲೆ ಗುಜರಾತ್ ಸಿಎಂ ಆಗಿದ್ದ ಮೋದಿ ಕಚೇರಿಯಿಂದ ಫೋನ್​ ಬಂದಿತ್ತು. ಆ ದಾಳಿಯಿಂದ ನಾನು ನೋವುಂಡಿದ್ದೆ. ಹತ್ಯೆ ಹಿಂದಿದ್ದ ಕ್ರೂರತ್ವ ಕಂಡು ಕಣ್ಣೀರಿಟ್ಟಿದ್ದೆ. ಆದ್ದರಿಂದ ನಾನು ಅವರೊಂದಿಗೆ ಮಾತನಾಡಲು ಆಗಿರಲಿಲ್ಲ. ಇದನ್ನು ಓದಿ – ಗೌರಿಹಬ್ಬ : ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ

ಕಚೇರಿ ಸಿಬ್ಬಂದಿ ಫೋನ್​ ನನ್ನ ಹತ್ತಿರ ತಂದಿಟ್ಟ ಕಾರಣ ಇದು ಅವರ ಗಮನಕ್ಕೆ ಬಂದಿತ್ತು.
ಅವರು ನಿರಂತರವಾಗಿ ಅಪ್ಡೇಟ್ಸ್​ ಪಡೆದುಕೊಳ್ಳು ಕರೆ ಮಾಡುತ್ತಲೇ ಇದ್ದರು. ಗಾಯಗೊಂಡಿದ್ದವರನ್ನು ಕಳುಹಿಸುವ ವೇಳೆಯೂ ದುಃಖದಿಂದ ಕಣ್ಣೀರಿಟ್ಟಿದ್ದೆ. ಈ ದೃಶ್ಯಗಳು ಮಾಧ್ಯಮಗಳಲ್ಲೂ ಪ್ರಸಾರ ಆಗಿತ್ತು. ಇದನ್ನೇ ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು. ಮೋದಿಯವರಿಗೆ ಮಕ್ಕಳು ಅಥವಾ ಸ್ವಂತ ಕುಟುಂಬವಿಲ್ಲದ ಕಾರಣ ನಾನು ಅವರನ್ನ ಒರಟು ಮನುಷ್ಯನೆಂದು ಭಾವಿಸಿದ್ದೆ. ಆದರೆ ಮೋದಿ ಕನಿಷ್ಠ ಮಾನವೀಯತೆಯನ್ನು ತೋರಿಸಿದ್ದಾರೆ ಅಂತಾ ಗುಲಾಂ ನಬಿ ಆಜಾದ್ ಮೋದಿಯನ್ನ ಹಾಡಿ ಹೊಗಳಿದ್ದಾರೆ.

indian festival
Share This Article
Leave a comment