December 22, 2024

Newsnap Kannada

The World at your finger tips!

aero india , airshow , banglore

PM Modi grand drive for Aero India-2023 Airshow ಏರೋ ಇಂಡಿಯಾ-2023 ಏರ್‌ಶೋಗೆ ಪ್ರಧಾನಿ ಮೋದಿ ಅದ್ಧೂರಿ ಚಾಲನೆ

ಏರೋ ಇಂಡಿಯಾ-2023 ಏರ್‌ಶೋಗೆ ಪ್ರಧಾನಿ ಮೋದಿ ಅದ್ಧೂರಿ ಚಾಲನೆ

Spread the love

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 5 ದಿನಗಳ ಕಾಲ ನಡೆಯುವ ವಿಶ್ವದ ಗಮನ ಸೆಳೆಯುವ ಏರೋ ಇಂಡಿಯಾ-2023 ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಚಾಲನೆ ನೀಡಿದರು.

ದೇಶದ 32 ದೇಶದ ರಕ್ಷಣಾ ಸಚಿವರು, 29 ರಾಷ್ಟ್ರಗಳ ವಾಯುಪಡೆಯ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿವೆ.ಮೀನು ಹಿಡಿಯಲು ತೆರಳಿದ್ದ ಅಣ್ಣ, ತಮ್ಮ ಕಾವೇರಿ ನದಿಯಲ್ಲಿ ಮುಳುಗಿ ಸಾವು

ಸಾರಂಗ್, ಸೂರ್ಯಕಿರಣ್, ವೈಮಾನಿಕ ಪ್ರದರ್ಶನ ತಂಡ, ಸುಖೋಯ್, ರಫೆಲ್ ತೇಜಸ್ ಸೇರಿದಂತೆ ಒಟ್ಟು 67 ವಿಮಾನಗಳಿಂದ ಸಾಹಸ ಪ್ರದರ್ಶನ ನಡೆಯಲಿದೆ. ಕಳೆದ ಬಾರಿ 44 ವಿಮಾನಗಳು ಪ್ರದರ್ಶನ ತೋರಿದ್ದವು.

ಏರ್ ಶೋನ ಮೊದಲ ಮೂರು ದಿನ ವಹಿವಾಟಿಗೆ ಸೀಮಿತಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಫೆ.16, 17 ರಂದು ಮಾತ್ರ ವೈಮಾನಿಕ ಪ್ರದರ್ಶನ ನೋಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಭಾರತ ನಿರ್ಮಿತ ಯುದ್ಧ ವಿಮಾನ ಹೆಲಿಕಾಪ್ಟರ್ ಹಾಗೂ ತಂತ್ರಜ್ಞಾನಗಳ ಪ್ರದರ್ಶನಕ್ಕಾಗಿಯೇ ಪ್ರತ್ಯೇಕವಾಗಿ ಇಂಡಿಯನ್ ಪೆವಿಲಿಯನ್ ನಿರ್ಮಾಣ ಮಾಡಲಾಗಿದೆ. ಅದರಲ್ಲಿ 115 ಕಂಪನಿಗಳು, 227 ಉತ್ಪನ್ನಗಳ ಪ್ರದರ್ಶನಕ್ಕಿಡಲಾಗುತ್ತಿದೆ. 149 ಉತ್ಪನ್ನಗಳನ್ನು ಭೌತಿಕವಾಗಿಯೇ ಪ್ರದರ್ಶಿಸಲಾಗಿದೆ.

2023ರ ವಿಶೇಷತೆ:

2023ರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ 98 ದೇಶಗಳಿಂದ 809 ಪ್ರದರ್ಶಕರು ಪಾಲ್ಗೊಂಡಿದ್ದಾರೆ, 67 ವಿಮಾನಗಳನ್ನು ಪ್ರದರ್ಶಿಸಲಾಗುತ್ತಿದೆ. ಒಟ್ಟು 75 ಸಾವಿರ ಕೋಟಿ ರೂ. ಗಳ 251 ಒಪ್ಪಂದಗಳು ನಡೆಯಲಿವೆ. 32 ವಿದೇಶಿ ರಕ್ಷಣಾ ಸಚಿವರು ಹಾಗೂ ವಿವಿಧ ದೇಶಗಳ 29 ವಾಯುಪಡೆ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

ಏರ್ ಶೋ ನಲ್ಲಿ 100ಕ್ಕೂ ಅಧಿಕ ಮಿತ್ರ ರಾಷ್ಟ್ರಗಳು ಭಾಗಿಯಾಗಲಿದ್ದು, ಕಳೆದ ಎಲ್ಲಾ ವರ್ಷಗಳ ದಾಖಲೆಯನ್ನ ಈ ಬಾರಿ ಏರ್ ಶೋ ಮುರಿಯುವ ವಿಶ್ವಾಸವಿದೆ ಅಂತಾ ರಕ್ಷಣಾ ಸಚಿವರು ಹೇಳಿದ್ದಾರೆ. ಒಟ್ಟಿನಲ್ಲಿ 5 ದಿನಗಳ ಕಾಲ ಬಾನಂಗಳದಲ್ಲಿ ಲೋಹದ ಹಕ್ಕಿಗಳು ಚಮತ್ಕಾರ, ಕಮಾಲ್ ನೋಡಿ ಪ್ರೇಕ್ಷಕರ ಮನೋಲ್ಲಾಸ ಹೊಂದಬಹುದು.

Copyright © All rights reserved Newsnap | Newsever by AF themes.
error: Content is protected !!