ಮೈಸೂರು – ಬೆಂಗಳೂರು ಎಕ್ಸ್ ಪ್ರೆಸ್ ವೇ ಗೆ 250 ರು ಟೋಲ್ ನಿಗದಿ ಸಾಧ್ಯತೆ – ಸಂಸದ ಪ್ರತಾಪ್ ಸಿಂಹ

Team Newsnap
1 Min Read

ಮೈಸೂರು – ಬೆಂಗಳೂರು ಬೆಂಗಳೂರು ಹೈವೇ ಗೆ 250 ರು ಟೋಲ್ ನಿಗದಿ ಮಾಡುವ ಸಾಧ್ಯತೆ ಇದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಸಂಸದ ಮಾತುಗಳು ಹರಿದಾಡುತ್ತಿವೆ ಅಂದಾಜಿನ ಟೋಲ್ ಫ್ಹೀಜ್ ಪಟ್ಟಿ. ನನ್ನ ಪ್ರಕಾರ ಎರಡು ಕಡೆ ಸೇರಿ ಬೆಂಗಳೂರಿನಿಂದ ಮೈಸೂರಿಗೆ 250 ರೂ. ಟೋಲ್ ನಿಗದಿಯಾಗಬಹುದು ಎಂದಿದ್ದಾರೆ ಫ್ಲೈ ಓವರ್ ಗಳು ಬಂದಾಗ ಸಾಮಾನ್ಯವಾಗಿ ಟೋಲ್ ದರ ಕೊಂಚ ಹೆಚ್ಚಾಗುತ್ತದೆ. ಈ ರಸ್ತೆಯಲ್ಲೂ ಫ್ಲೈ ಓವರ್ ಗಳು ಇರುವ ಕಾರಣ 250 ರು ಟೋಲ್ ನಿಗದಿ ಆಗಬಹುದು ಎಂದರು. ಇದನ್ನು ಓದಿ – ಏರೋ ಇಂಡಿಯಾ-2023 ಏರ್‌ಶೋಗೆ ಪ್ರಧಾನಿ ಮೋದಿ ಅದ್ಧೂರಿ ಚಾಲನೆ

blr to mys highway

ಐ ಲ್ಯಾಂಡ್ ನಿರ್ಮಾಣ:

ಮೈಸೂರು – ಬೆಂಗಳೂರು ನಡುವಿನ ಹೈವೆಯಲ್ಲಿ ಚನ್ನಪಟ್ಟಣದ ಬಳಿ 30 ಎಕರೆಯಲ್ಲಿ ಐ ಲ್ಯಾಂಡ್ ರೂಪದಲ್ಲಿ ರೆಸ್ಟ್ ಏರಿಯಾ ನಿರ್ಮಾಣ ಮಾಡುತ್ತೇವೆ.

ಅಲ್ಲಿ ಎಲ್ಲಾ ಬಗೆಯ ಹೋಟೆಲ್ ಗಳು ಇರುತ್ತದೆ. ಆರು ತಿಂಗಳಲ್ಲಿ ಈ ರೆಸ್ಟ್ ಏರಿಯಾ ನಿರ್ಮಾಣವಾಗುತ್ತದೆ

ಬೆಂಗಳೂರು – ಮೈಸೂರು ಹೆದ್ದಾರಿ ಬಹುತೇಕ ಪೂರ್ಣವಾಗುವ ಸ್ಥಿತಿಯಲ್ಲಿದೆ. ಮಾರ್ಚ್ ಎರಡು ಅಥವಾ ಮೂರನೇ ವಾರದಲ್ಲಿ ರಸ್ತೆ ಲೋಕಾರ್ಪಣೆವಾಗಲಿದೆ. ಬೆಂಗಳೂರು – ಮೈಸೂರು ಹೈವೇ ಲೋಕಾರ್ಪಣೆ ವೇಳೆ ಪ್ರಧಾನಿ ಮಂತ್ರಿಯವರು ಕುಶಾಲನಗರ – ಮೈಸೂರು ನಡುವಿನ ಹೆದ್ದಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ 3,500 ಕೋಟಿ ರೂಪಾಯಿ ವೆಚ್ಚದಲ್ಲಿ 115 ಕಿ.ಮೀ. ಹೈವೇ ನಿರ್ಮಾಣಕ್ಕೂ ಶಂಕು ಸ್ಥಾಪನೆಯಾದ 24 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣವಾಗಲಿದೆ ಎಂದರು.

Share This Article
Leave a comment