December 23, 2024

Newsnap Kannada

The World at your finger tips!

farmer , deposit , PM Yojana

PM Kisan 13th installment money also reached farmers account? Call this number ಪಿಎಂ ಕಿಸಾನ್ 13ನೇ ಕಂತಿನ ಹಣವಿನ್ನೂ ರೈತರ ಖಾತೆಗೆ ಬಂದಿಲ್ವಾ?ಈ ಸಂಖ್ಯೆಗೆ ಕರೆ ಮಾಡಿ

ಪಿಎಂ ಕಿಸಾನ್ ಯೋಜನೆ: ರೈತರ ಖಾತೆಗೆ ತಲಾ 2 ಸಾವಿರ ರು ಜಮಾ

Spread the love
  • ಪ್ರಧಾನಿಯಿಂದ 13 ನೇ ಕಂತಿನ 16 ಸಾವಿರ ಕೋಟಿ ರು ಬಿಡುಗಡೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಅಡಿಯಲ್ಲಿ 8 ಕೋಟಿಗೂ ಹೆಚ್ಚು ರೈತ ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ 16,000 ಕೋಟಿ ರೂ.ಗಳ 13 ನೇ ಕಂತನ್ನು ಬಿಡುಗಡೆ ಮಾಡಿದರು.

ಬೆಳಗಾವಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಈ ಯೋಜನೆ ಹಣ ಬಿಡುಗಡೆ ಮಾಡಿದರು . ಈ ಯೋಜನೆಯಡಿ, ಅರ್ಹ ರೈತ ಕುಟುಂಬಗಳಿಗೆ ಪ್ರತಿ ವರ್ಷಕ್ಕೆ 6,000 ರೂ.ಗಳನ್ನು ತಲಾ 2,000 ರೂ.ಗಳ ಮೂರು ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ ಎಂದರು.

ಹಣ ವರ್ಗಾವಣೆ ಕಾರ್ಯಕ್ರಮದ ವೇಳೆ ಮೋದಿ ಅವರು ಪುನರಾಭಿವೃದ್ಧಿಗೊಂಡ ಬೆಳಗಾವಿ ರೈಲು ನಿಲ್ದಾಣದ ಕಟ್ಟಡವನ್ನು ದೇಶಕ್ಕೆ ಸಮರ್ಪಿಸಿದರು.

ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಕರ್ಯಗಳನ್ನು ಒದಗಿಸಲು ಅಂದಾಜು 190 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲು ನಿಲ್ದಾಣವನ್ನು ಮರುಅಭಿವೃದ್ಧಿಗೊಳಿಸಲಾಗಿದೆ.

ಪ್ರಧಾನಿಯವರು ದೇಶಕ್ಕೆ ಸಮರ್ಪಿಸಿದ ಮತ್ತೊಂದು ರೈಲ್ವೇ ಯೋಜನೆ ಬೆಳಗಾವಿಯಲ್ಲಿ ಲೋಂಡಾ-ಬೆಳಗಾವಿ-ಘಟಪ್ರಭಾ ವಿಭಾಗದ ನಡುವಿನ ರೈಲು ಮಾರ್ಗ ದ್ವಿಗುಣಗೊಳಿಸುವ ಯೋಜನೆಯಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರದ ಸಚಿವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನು ಓದಿ –ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ

PM kisan Yojana , Pradhan Mantri Kisan Samman Nidhi , Modi Sarkar , Good news to Farmers , Government of India

Copyright © All rights reserved Newsnap | Newsever by AF themes.
error: Content is protected !!