ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ

Team Newsnap
1 Min Read
  • ಮಲೆನಾಡಿನ ಜನರಿಗೆ ಬಿಗ್ ಗಿಪ್ಟ್ ನೀಡಿದ ಮೋದಿ
  • ರಾಜ್ಯದ ಎರಡನೇ ಅತಿ ಉದ್ದನೆಯ ರನ್ ವೇ
  • ಜನ್ಮದಿನದಂದು ಯಡಿಯೂರಪ್ಪಗೆ ಪ್ರಧಾನಿ ಮೋದಿ ಸನ್ಮಾನ

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶಿವಮೊಗ್ಗದಲ್ಲಿ ನೂತನ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದರು.

ನೂತನ ಏರ್​ಪೋರ್ಟ್​ ಉದ್ಘಾಟನಾ ಸಮಾರಂಭ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಹಸಿರು ಶಾಲು ಹೊದಿಸಿ, ಅಡಕೆ ಹಾರ ಹಾಕಿ, ಪೇಟ ತೊಡಿಸಿ, ನೇಗಿಲು ನೀಡಿ ಪ್ರಧಾನಿ ಮೋದಿ ಸನ್ಮಾನಿಸಿದರು

ಈ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಏರ್‌ ಪೋರ್ಟ್‌ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸಿದ್ದು ಸಂತಸ ತಂದಿದೆ. ಇಂದು ನನ್ನ ಪಾಲಿಗೆ ಸಾರ್ಥಕತೆಯ ದಿನ ಆಗಿದೆ. ಕೊಟ್ಟ ಮಾತಿನಂತೆ ಏರ್‌ ಪೋರ್ಟ್‌ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ ಎಂದು ಹೇಳಿದರು.

ಈ ದಿನ ಬಹಳ ವೈಶಿಷ್ಟ್ಯಪುರ್ಣವಾದ್ದು ಇದು ಕೇವಲ ವಿಮಾನ ನಿಲ್ದಾಣವಲ್ಲ, ಅಭಿವೃದ್ಧಿ ಶಕ್ತಿಯಾಗಿದೆ. ವೈಶಿಷ್ಟ್ಯಪೂರ್ಣವಾದದ್ದು ಮಲೆನಾಡು ಭಾಗದ ಜನರ ಕನಸು ನನಸಾಗುತ್ತಿರುವ ಶುಭ ಸಂಕೇತ. ಮೋದಿ ಆಶೀರ್ವಾದದಿಂದ ನಾಡಿನ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಇಂತಹ ಅವಕಾಶ ನನಗೆ ಸಿಕ್ಕಿದ್ದಕ್ಕೆ ಜನರಿಗೆ ನಾನು ಋಣಿಯಾಗಿದ್ದೇನೆ ಎಂದರು

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಮಾತಿನಂತೆ ಕೆಲಸ ಮಾಡಿದ್ದೇನೆ. ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ಒದಗಿಸಿಕೊಟ್ಟಿದ್ದೇನೆ. ಮಹಿಳಾ ಪಿಎಸ್ ಐ ಜೊತೆ ಅಸಭ್ಯ ವರ್ತನೆ- ತುಮಕೂರಿನ ಯುವ ಕಾಂಗ್ರೆಸ್ ಅಧ್ಯಕ್ಷನ ಬಂಧನ

ಮೋದಿ ನೇತೃತ್ವದಲ್ಲಿ ಡಬಲ್​ ಇಂಜಿನ್ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.ಶಿವಮೊಗ್ಗ ಅಭಿವೃದ್ಧಿಗೆ ಏರ್‌ ಪೋರ್ಟ್‌ ಸಹಕಾರಿಯಾಗಿದೆ. ಇಡೀ ವಿಶ್ವವೇ ಮೆಚ್ಚಿರುವ ಆದರ್ಶ ನಾಯಕ. ಮೋದಿಯವರು ಏರ್‌ ಪೋರ್ಟ್‌ ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು.

Share This Article
Leave a comment