ಪಿಎಂ ಕಿಸಾನ್ ಹಣ ದ್ವಿಗುಣ : ರೈತರಿಗೆ 12 ಸಾವಿರ ಸಹಾಯ ಧನ ನೀಡುವ ನಿರ್ಧಾರ ?

Team Newsnap
1 Min Read

ದೇಶದ ರೈತರಿಗೆ ಬರಲಿದೆ ಸಿಹಿಸುದ್ದಿ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ನೀಡಲಾಗುತ್ತಿರುವ ಹಣ ಸದ್ಯದಲ್ಲೇ ದ್ವಿಗುಣಗೊಳ್ಳಲಿದೆ.

ಈಗ ಪ್ರತಿ ನಾಲ್ಕು ತಿಂಗಳಿಗೊಮ್ಮೆ ೨ ಸಾವಿರ ರೂ. ನೀಡಲಾಗುತ್ತಿದೆ. ಅದು ೪ ಸಾವಿರರು.ಗೆ ಹೆಚ್ಚಳಗೊಳ್ಳಲಿದೆ. ಅಂದರೆ ವಾರ್ಷಿಕ ಬರುತ್ತಿರುವ 6 ಸಾವಿರರೂ.ಗಳು 12 ಸಾವಿರಕ್ಕೆ ಏರಲಿದೆ.

ಬಿಹಾರದ ಕೃಷಿ ಸಚಿವ ಅಮರೇಂದ್ರ ಪ್ರತಾಪ್ ಸಿಂಗ್, ಕೇಂದ್ರದ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯಲ್ಲಿ ಭೇಟಿ ಮಾಡಿ ಈ ಸಂಬಂಧ ಚರ್ಚಿಸಿದರು.

ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರಮಾಣವನ್ನು ದ್ವಿಗುಣಗೊಳಿಸಲು ಸಿದ್ಧತೆ ನಡೆಸಿದೆ ಎಂದು ಪ್ರತಾಪ್ ಸಿಂಗ್ ಹೇಳಿದರೆಂದು ವರದಿಯಾಗಿದೆ.

ಇತ್ತ ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೇಶಾದ್ಯಂತ 9.75 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 19,500 ಕೋಟಿ ರು.ಗಳನ್ನು ವರ್ಗಾಯಿಸಿದ್ದಾರೆ.

ರೈತರ ಜೀವನ ಸುಲಭಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಹೇಳಿದ್ದರು. ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಕೇಂದ್ರವು 9 ಕಂತುಗಳನ್ನು ಬಿಡುಗಡೆ ಮಾಡಿದೆ. 2018 ರಲ್ಲಿಈ ಯೋಜನೆ ಆರಂಭಗೊಂಡಿದೆ.‌

Share This Article
Leave a comment