ಮೈಸೂರಿನಿಂದ ಶಿರಡಿ, ತಿರುಪತಿ, ದೆಹಲಿ, ಮುಂಬೈ ನಗರಗಳಿಗೂ ವಿಮಾನ ಸಂಚಾರಕ್ಕೆ ಪ್ಲಾನ್ – ಸಂಸದ ಸಿಂಹ

Team Newsnap
1 Min Read

ಮುಂದಿನ ದಿನಗಳಲ್ಲಿ ದೇಶದ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಕಲ್ಪಿಸಲು ಮೈಸೂರಿನಿಂದ ವಿಮಾನ ಸಂಚಾರ ಹೆಚ್ಚಿಸಲು ಆಲೋಚಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಸಿಂಹ ಮೈಸೂರು ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ದೇಶದ ಮತ್ತಷ್ಟು ನಗರಗಳಿಗೆ ವಿಮಾನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಏಲ್ಲೆಲ್ಲಿಗೆ ವಿಮಾನ ಸಂಚಾರದ ಉದ್ದೇಶವಿದೆ?

ಮೈಸೂರಿನಿಂದ ಮುಂದಿನ ದಿನಗಳಲ್ಲಿ ತಿರುಪತಿ, ಶಿರಡಿ, ಕೊಯಮತ್ತೂರು, ಅಹಮದಾಬಾದ್, ದೆಹಲಿ, ಮುಂಬೈ ಮಹಾನಗರಕ್ಕೆ ವಿಮಾನಗಳ ಹಾರಾಟ ಆರಂಭಿಸುವ ಉದ್ದೇವಿದೆ. ಆದರೆ ತಕ್ಷಣ ಸಾಧ್ಯವಿಲ್ಲ. ಏಕೆಂದರೆ ಮೈಸೂರು ವಿಮಾನ ನಿಲ್ದಾಣದಲ್ಲಿ ಈಗಿರುವ ರನ್ ವೇ ಸಾಕಾಗುವುದಿಲ್ಲ ಎಂದರು.

ಮೈಸೂರಿನಲ್ಲಿ ವಿಮಾನಗಳ ಹಾರಾಟ ಮತ್ತು ಬಂದಿಳಿಯಲು ರನ್ ವೇ ವಿಸ್ತರಣೆ ಮಾಡುವ ಅಗತ್ಯವಿದೆ. ಆ ನಂತರವೇ ಪ್ರಮುಖ ನಗರಗಳಿಗೆ ಮೈಸೂರಿನಿಂದ ವಿಮಾನಗಳ ಹಾರಾಟ ಸಾಧ್ಯವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈಗಾಗಲೇ ಹಾರಾಟ ನಡೆಸುತ್ತಿರುವ ವಿಮಾನಗಳಿಗೆ ಮೈಸೂರಿನ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಗೋವಾಗೆ ತೆರಳುವ ವಿಮಾನದಲ್ಲಿ ನೂರಕ್ಕೆ ನೂರರಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪ್ರತಾಪ್ ಸಿಂಹ ವಿವರಿಸಿದರು.

Share This Article
Leave a comment