January 7, 2025

Newsnap Kannada

The World at your finger tips!

crime,murder,women

ಗಂಡ ಕೊಲೆಗೆ ಗೆಳೆಯನ ಸಾಥ್: ಮುಹೂರ್ತ ಇಟ್ಟು ಕಾರ್ಯ ಮುಗಿಸಿದ ಪತ್ನಿ

Spread the love

ಪ್ರಿಯಕರನಿಗಾಗಿ ಗಂಡನನ್ನೇ ಕೊಲೆ ಮಾಡಲು ಸಹಕಾರ ನೀಡಿದ್ದ ಕೊಲೆ ಪ್ರಕರಣವನ್ನು ಪೋಲೀಸರು ಭೇದಿಸಿದ್ದಾರೆ.

ನಂಜನಗೂಡಿನ ಅಡ್ಡಹಳ್ಳಿಯ ಶವ ರಾಜ್ ಕೊಲೆಯಾದ ವ್ಯಕ್ತಿ. ಆತನ ಪತ್ನಿ ಸೌಮ್ಯ , ಯೋಗೇಶ್ ಹಾಗೂ ಚಲುವರಾಜು ಸೇರಿ ಸಂಚು ಮಾಡಿ ಕೊಲೆ ಮಾಡಿದ್ದು ಬೆಳಕಿಗೆ ಬಂದಿದೆ.

ಸೌಮ್ಯ ಶುಂಠಿ ಕೆಲಸಕ್ಕೆ ಆಟೋದಲ್ಲಿ ಹೋಗುವ ವೇಳೆ ಚಾಲಕ ಯೋಗೇಶ್ ಆತ್ಮೀಯತೆ ಬೆಳಸಿಕೊಂಡಿದ್ದರು. ಈ ರೀತಿಯ ಸಲುಗೆ, ಸಂಬಂಧದ ಬಗ್ಗೆ ಪತಿ ಶಿವರಾಜು ದೂರ ಇರುವಂತೆ ಹೇಳಿ,
ಶುಂಠಿ ಕೆಲಸಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದನು.

ee426b2d 0d29 4d65 97fd 63a5ac078de2

ಗಂಡನ ಕಟ್ಟಪ್ಪಣೆಯಿಂದ ಸೌಮ್ಯಳನ್ನು ಭೇಟಿ ಮಾಡಲು ಆಟೋ ಚಾಲಕ ಯೋಗೇಶ್ ಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಶಿವರಾಜ್ ನನ್ನು ಕೊಲೆ ಮಾಡಲು ಪತ್ನಿ ಸೌಮ್ಯ ಸೇರಿ ಪ್ಲಾನ್ ಮಾಡಿದ ಯೋಗೇಶ್ , ಈ ಕೃತ್ಯಕ್ಕೆ ಗೆಳೆಯ ಚೆಲುವರಾಜ್ ನೆರವು ಪಡೆದನು.

ಯೋಗೇಶ್ ನ ನಿರ್ದೇಶನ ಮೇರೆಗೆ ಸೌಮ್ಯ ಪತಿಗೆ ಕಂಠಪೂರ್ತಿ ಕುಡಿಸಿದಳು. ತರುವಾಯ ಯೋಗೇಶ್ ಮತ್ತು ಚಲುವರಾಜು ಜೊತೆ ಸೇರಿ ಡಿ. 7 ರಂದು ಶಿವರಾಜ್ ಕೈ ಕಾಲು ಕಟ್ಟಿ ಕಬಿನಿ ಬಲದಂಡೆ ನಾಲೆಗೆ ಶವ ಎಸೆದಿದ್ದರು.
ಆದರೆ ಪತಿ ನಾಪತ್ತೆಯಾಗಿರುವ ಬಗ್ಗೆ ಸೌಮ್ಯ ಪೊಲೀಸರಿಗೆ ದೂರು ಕೂಡ ನೀಡಲಿಲ್ಲ.

ಡಿ. 15 ರಂದು ನಾಲೆಯಲ್ಲಿ ಶವ ಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿ ಶವ ಪತ್ತೆಯಾದ ಮೇಲೆ ಪೊಲೀಸರು ಮೃತನ ಪತ್ತೆ ಕಾರ್ಯ ಕೈಗೊಂಡರು.

ಪೋಲಿಸರಿಗೆ ಕೆಲವು ಸಂಶಯ ಬಂದ ಮೇಲೆ ಸೌಮ್ಯಳನ್ನು ವಿಚಾರಣೆಗೆ ಒಳಪಡಿಸಿದಾಗ ಸೌಮ್ಯ, ಯೋಗೇಶ್ ಮತ್ತು ಚಲುವರಾಜ್ ಜೊತೆ ಸೇರಿ ಕೊಲೆ ಮಾಡಿರವುದಾಗಿ ಒಪ್ಪಿಕೊಂಡರು. ಈಗ
ನಂಜನಗೂಡು ಪೋಲಿಸರು ಮೂವರನ್ನು ಬಂಧಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!