ದೊಡ್ಡವರೇ ಟಾರ್ಗೆಟ್‌ : ಕೋಟ್ಯಾಂತರ ರು. ಪಂಗನಾಮ ಹಾಕಿದ ‘ ರಾಜ ‘ ಈಗ ಪೋಲಿಸರ ಅತಿಥಿ !

Team Newsnap
3 Min Read
  • ಮಂಡ್ಯ ಮೂಲದ ಪ್ರೇಮಾ ಪತಿಯ
    ಯುವರಾಜ್ ಕರ್ಮಕಾಂಡ ಬಯಲು. ಪತಿ ಯವರಾಜ್ ಸ್ವಾಮಿ ಪೋಲಿಸರ ಬಂಧನದಲ್ಲಿ.
  • ತಾನು ಬಿಜೆಪಿ ಪ್ರಭಾವಿ ನಾಯಕ ಎಂದು ಹೇಳಿ ನಿವೃತ್ತಿ ನ್ಯಾಯಧೀಶರು. ರಾಜಕಾರಣಿಗಳನ್ನೂ ಬಿಡದೇ ಚೆನ್ನಾಗಿ ಯಾಮಾರಿಸಿ ಕೋಟ್ಯಾಂತರ ರುಗಳಿಗೆ ಪಂಗನಾಮ ಹಾಕಿದ ಯುವರಾಜ್ ಸ್ವಾಮಿ ಈಗ ಸಿಸಿಬಿ ವಶದಲ್ಲಿ ಡ್ರಿಲ್ ನಡೆಯುತ್ತಿದೆ.
  • ಪತ್ನಿ ಪ್ರೇಮಾ ಯವರಾಜ್ ಕೂಡ ಈತನ ಕೃತ್ಯಗಳಲ್ಲಿ ಸಾಥ್ ನೀಡಿರುವ ಶಂಕೆ ಹಿನ್ನೆಲೆಯಲ್ಲಿ ಸಿಸಿಬಿ ಪೋಲೀಸರು ಆಕೆಯನ್ನೂ ಕೂಡ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡುವ ಸಾಧ್ಯತೆ. ಅಧಿಕಾರಿಗಳಿಗೆ, ನಿವೃತ್ತ ನ್ಯಾಯಾಧೀಶರಿಗೆ, ರಾಜಕಾರಣಿಗಳಿಗೆ ಕೆಲಸ ಮಾಡಿಸಿಕೊಡುವುದಾಗಿ ಹೇಳಿ ಕೋಟ್ಯಾಂತರ ರು ವಂಚನೆ ಮಾಡಿರುವುದನ್ನು ಸಿಸಿಬಿ ಪೋಲಿಸರು ಪತ್ತೆ ಹಚ್ಚಿ ಯುವರಾಜ್ ಸ್ವಾಮಿ ಎಂಬಾತನನ್ನು ಬಂಧಿಸಿ, ಹೆಡಮುರಗಿ ಕಟ್ಟಿದ ಮೇಲೆ ಮತ್ತಷ್ಟು ಮೋಸ, ವಂಚನೆ ಪ್ರಕರಣಗಳನ್ನು ಬಾಯಿ ಬಿಟ್ಟಿದ್ದಾನೆ.

ಮನೆಯಲ್ಲಿದ್ದ 29 ಲಕ್ಷ ರು ನಗದು ವಶ:

ಬೆಂಗಳೂರಿನ ಅನ್ನಪೂರ್ಣೇಶ್ವರಿ
ಲೇ ಔಟ್ ನ ಮನೆಯಲ್ಲಿ ಇಂದು ಬೆಳಿಗ್ಗೆ ಯುವ ರಾಜ್ ಸ್ವಾಮಿಯನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು 29 ಲಕ್ಷ ರೂಪಾಯಿ ನಗದು ಹಾಗೂ 70 ಕೋಟಿ ರೂಪಾಯಿನ ಚೆಕ್ ಗಳನ್ನು ವಶಪಡಿಸಿ ಕೊಂಡಿದ್ದರು.

ಬೆಂಗಳೂರಿನಲ್ಲಿರುವ ವಸಂತನಗರದ ವರ್ಚುವಲ್ ಕೋರ್ಟ್ ಗೆ ಹಾಜರುಪಡಿಸಿದಾಗ ಸಿಸಿಬಿ ಮನವಿ ಮೇರೆಗೆ ನ್ಯಾಯಾಲಯ ಯುವರಾಜ್ ನನ್ನು ಐದು ದಿನಗಳ ಪೋಲೀಸರ ಕಸ್ಟಡಿಗೆ ನೀಡಿದೆ.

ಆರ್ ಎಸ್ಎಸ್ ಮತ್ತು ಬಿಜೆಪಿ ಜೊತೆ ನಿಕಟ ಸಂಬಂಧ ಹೊಂದಿರುವುದಾಗಿ ನಂಬಿಸುತ್ತಿದ್ದ ಯುವರಾಜ್ ಸ್ವಾಮಿ ಬಿಜೆಪಿ ಮತ್ತು ಸಂಘ ಪರಿವಾರದವರ ತಲೆಯ ಮೇಲೆ ಹೊಡೆಯುವಂತೆ ಡ್ರೆಸ್ ಮಾಡಿಕೊಳ್ಳುತ್ತಿದ್ದ. ಹಣೆ ಕುಂಕುಮದ ಬೊಟ್ಟು ಇಟ್ಟುಕೊಳ್ಳುತ್ತಿದ್ದನು. ಒಟ್ಟಾರೆ ಆತ ಅಲಂಕಾರ ಪ್ರಿಯನಾಗಿದ್ದನು.

ದೆಹಲಿ ಮತ್ತು ಬೆಂಗಳೂರಿಗೆ ವಿಮಾನ ದಲ್ಲಿ ಹೋಗಿ ಬರುವುದು ಈತನಿಗೆ ಪಕ್ಕದ ಮನೆಗೆ ಹೋಗಿ ಬಂದಂತೆ ಆಗಿತ್ತು. ದೆಹಲಿ ಸ್ವಾಮಿ ಅಂತಲೆ ಫೇಮಸ್. ಯುವರಾಜ್ ಸ್ವಾಮಿ ವಂಚನೆಗೆ ಸಿಲುಕದವರೇ ಇಲ್ಲ.

ಪೋಲಿಸರಿಗೆ ದೂರು ನೀಡಿದ್ದ ನಿವೃತ್ತ ನ್ಯಾಯಾಧೀಶರು :

ನಿವೃತ್ತ ನ್ಯಾಯಾಧೀಶರೊಬ್ಬರನ್ನು ಮೋಸ ಜಾಲಕ್ಕೆ ಖೆಡ್ಡಾ ತೋಡಿದ ಯುವರಾಜ್ ಸ್ವಾಮಿ, ರಾಜ್ಯಪಾಲೆ ಮಾಡಿಸುವುದಾಗಿ ಅವರಿಂದ ಕೋಟ್ಯಾಂತರ ರು ಹಣ ಪಡೆದಿದ್ದನು. 8 ತಿಂಗಳಾದರೂ ನುಡಿದಂತೆ ನಡೆಯದ ಕಾರಣ ನಿವೃತ್ತ ನ್ಯಾಯಾಧೀಶೆಯು ಪೊಲೀಸರಿಗೆ ದೂರು ನೀಡಿದ್ದರು.
ತರುವಾಯ ಪೊಲೀಸರು ಯುವರಾಜ್ ಸ್ವಾಮಿ ಹಿಂದೆ ಬಿದ್ದರು.

ತನ್ನ ಚಾಲಕನಿಗೇ ಮೋಸ :

ತನ್ನ ಕಾರಿನ ಚಾಲಕ ಹೆಸರಿನಲ್ಲಿ ಬ್ಯಾಂಕ್ ಖಾತೆ ಮಾಡಿಸಿ ಅವನ ಖಾತೆಗೆ 1. ಕೋಟಿ 20 ಲಕ್ಷ ರು ವರ್ಗಾವಣೆ ಮಾಡಿಸಿದ್ದನು. ಚಾಲಕನಿಂದ ಚೆಕ್ ಗಳಿಗೆ ಸಹಿ ಪಡೆದು ನಾಲ್ಕು ಕಂತುಗಳಲ್ಲಿ ಹಣ ಡ್ರಾ ಮಾಡಿದ್ದನು.

ಚಾಲಕನಿಗೆ ತೆರಿಗೆ ಇಲಾಖೆಯ ನೋಟಿಸ್ :

ಕೋಟ್ಯಾಂತರ ರೂಪಾಯಿ ವ್ಯವಹಾರದ ಮಾಹಿತಿ ಪಡೆದ ಆದಾಯ ತೆರಿಗೆ ಇಲಾಖೆಯವರು ಚಾಲಕನಿಗೆ ನೋಟಿಸ್ ನೀಡಿದ್ದರು. ಆ ನೋಟಿಸ್ ಹಿಡಿದು ಡ್ರೈವರ್ ಯುವರಾಜ್ ಸ್ವಾಮಿ ಹತ್ತಿರ ಹೋದಾಗ ಅವನಿಗೆ ಬೈಯ್ದು ಹೊಡೆದು ಕಳುಹಿಸಿದ್ದನು. ಈ ಸಂಬಂಧ ಡ್ರೈವರ್ ಕೂಡ ಪೊಲೀಸರಿಗೆ ಇದೇ ಸಮಯದಲ್ಲಿ ದೂರು ನೀಡಿದ್ದರು.

ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಕೋರೆಯನ್ನು ರಾಜ್ಯಸಭೆಗೆ ಪುನಾರಾಯ್ಕೆ ಮಾಡುವುದಾಗಿ 10 ಕೋಟಿ ರು ನಾಮ ಹಾಕಿದ್ದನು. ನಿಗಮ ಮಂಡಳಿಗೆ ಅಧ್ಯಕ್ಷರಾಗಿ ಮಾಡುವುದಾಗಿ ಬಹಳಷ್ಟು ಜನರಿಗೆ ಕೋಟಿ ಕೋಟಿ ನಾಮ ಎಳೆದಿದ್ದಾನೆ.

ಇದು ಯುವರಾಜ್ ಮೋಸದ ಅವತಾರಗಳು. ಬಗೆದಷ್ಟು ಬರುತ್ತವೆ. ಪೋಲಿಸರಿಗೆ ಸಾಕಾಗಿ ಹೋಗಿದೆ.
ಪತ್ನಿ ಪ್ರೇಮಾ ಯುವರಾಜ್ ಕೂಡಾ
ಯುವರಾಜ್ ಸ್ವಾಮಿಯ ವಂಚನೆಯಲ್ಲಿ ಸಾಥ್ ನೀಡಿದ್ದಾಳೆಂಬ ಮಾಹಿತಿ ಇದೆ. ಸಿಸಿಬಿ ಪೊಲೀಸರು ಆಕೆಗೂ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ನೋಟಿಸ್ ನೀಡುವ ಸಾಧ್ಯತೆ ಯನ್ನು ತಳ್ಳಿ ಹಾಕುವಂತಿಲ್ಕ.






Share This Article
Leave a comment