ಸಹಿ ಪೋರ್ಜರಿ ಮಾಡಿ 2.35 ಕೋಟಿ ರು ಸರ್ಕಾರಿ ಹಣ ಮಂಜೂರಾತಿಗೆ ಯತ್ನಿಸಿರುವ ಆರೋಪದ ಹಿನ್ನೆಲೆಯಲ್ಲಿ ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ರವಿಕುಮಾರ್ ವಿರುದ್ಧ FIR ದಾಖಲಾಗಿದೆ.
ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಹಾಗೂ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಅವರ ಸಹಿ ಫೋರ್ಜರಿ ಮಾಡಿರುವ ಆರೋಪದ ಮೇಲೆ ರವಿಕುಮಾರ್ ಮೇಲೆ ಎಫ್ಐಆರ್ ದಾಖಲಾಗಿದೆ.
ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ IPC 420, 506, 504, 509, 380, 465, 468, 471 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಭೋವಿ ಅಭಿವೃದ್ಧಿ ನಿಗಮದ ಇಬ್ಬರು ಹಿರಿಯ ಕೆಎಎಸ್ ಅಧಿಕಾರಿಗಳ ಸಹಿಯನ್ನು ನಕಲು ಮಾಡಿ 2.35 ಕೋಟಿ ಲೂಟಿ ಮಾಡಲು ಪ್ಲಾನ್ ಮಾಡಿರುವ ಆರೋಪ ರವಿಕುಮಾರ್ ಮೇಲೆ ಇದೆ. ಹೀಗಾಗಿ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಐಪಿಸಿ 420 ಅಡಿಯಲ್ಲಿ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಹಾಗೂ ಪ್ರಧಾನ ವ್ಯವಸ್ಥಾಪಕ ಡಾ. ಬಿ.ಕೆ ನಾಗರಾಜಪ್ಪ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ರವಿಕುಮಾರ್ ಪರಾರಿಯಾಗಿದ್ದಾನೆ .
ಕಳೆದ ಮಾರ್ಚ್ನಲ್ಲಿ ನಿಗಮಕ್ಕೆ ಸೇರಿದ್ದ ಐಸಿಐಸಿಐ ಬ್ಯಾಂಕ್ನ ಚೆಕ್ಗಳು ಕಳುವಾಗಿದ್ದವು. ಹೀಗಾಗಿ ಐಸಿಐಸಿಐ ಬ್ಯಾಂಕ್ಗೆ ಭೋವಿ ಅಭಿವೃದ್ಧಿ ನಿಗಮ ದೂರು ನೀಡಿತ್ತು.
ಕಳುವಾಗಿದ್ದ ಚೆಕ್ ಬಳಸಿ ರಾಯಚೂರು ಜಿಲ್ಲೆಗೆ 52 ಲಕ್ಷ ರು ಹಣವನ್ನು ನಿರ್ದೇಶಕ ರವಿಕುಮಾರ್ ಜಮಾ ಮಾಡಿದ್ದರಂತೆ. 52 ಲಕ್ಷ ಅಕ್ರಮವಾಗಿ ಜಮಾ ಮಾಡಿರುವುದಲ್ಲದೇ 60 ಅಕ್ರಮ ಫಲಾಪೇಕ್ಷಿಗಳ ಹೆಸರಲ್ಲಿ 1 ಕೋಟಿ 83 ಲಕ್ಷ ಹಣ ಮಂಜೂರಾತಿಗೆ ಸಹಿ ಫೊರ್ಜರಿ ಮಾಡಿದ್ದರು.
ಏಳು ಜಿಲ್ಲೆಯ ಅಧಿಕಾರಿಗಳಿಗೆ ಇ-ಮೇಲ್ ಕಳುಹಿಸಿರೋದು ಗೊತ್ತಾಗಿದೆ. ಮೇ 04 ರಂದು ಭೋವಿ ಅಭಿವೃದ್ಧಿ ನಿಗಮ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರವಿಕುಮಾರ್ ಅಕ್ರಮ ಮಾಡಿರೋದು ಎಲ್ಲರ ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಇದನ್ನ ಪ್ರಶ್ನಿಸಲು ಮುಂದಾದ ಕೆಎಎಸ್ ಅಧಿಕಾರಿಗಳಿಗೆ ರವಿಕುಮಾರ್ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು