ದೇಶದಲ್ಲಿ ಮತ್ತೆ ಪೆಟ್ರೋಲ್ , ಡಿಸೇಲ್ ಬೆಲೆ ಇಳಿಕೆ ಸಾಧ್ಯತೆ

Team Newsnap
1 Min Read

ಮತ್ತೆ ಪೆಟ್ರೋಲ್​​ , ಡಿಸೇಲ್ ಬೆಲೆ ಇಳಿಕೆ ಕಾಣುವ ಸಾಧ್ಯತೆ ಇದೆ. ಇದು ಶ್ರೀ ಸಾಮಾನ್ಯರಿಗೆ ಸದ್ಯದಲ್ಲೇ ಇನ್ನೊಂದು ಗುಡ್​ ನ್ಯೂಸ್​ ಸಿಗಬಹುದು.

ಕೇಂದ್ರವು ತನ್ನ ಐದು ಮಿಲಿಯನ್ ಬ್ಯಾರಲ್​ ಕಚ್ಚಾ ತೈಲ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆ ಇನ್ನಷ್ಟು ಇಳಿಕೆ ಕಾಣುವ ನಿರೀಕ್ಷೆ ಇದೆ.

ದೆಹಲಿಯಲ್ಲಿ ನಡೆದ ಉನ್ನತ ಸಚಿವಾಲಯ ಹಾಗೂ ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್​ ಸಿಂಗ್​ ಪುರಿ ಈ ನಿರ್ಧಾರ ಕೈಗೊಂಡಿದ್ದಾರೆ

ಅಮೆರಿಕ, ಚೀನಾ, ಜಪಾನ್​ ಹಾಗೂ ದಕ್ಷಿಣ ಕೋರಿಯಾ ಸೇರಿದಂತೆ ಇತರೆ ಪ್ರಮುಖ ಜಾಗತಿಕ ಇಂಧನ ಗ್ರಾಹಕರ ಜೊತೆಯಲ್ಲಿ ಸಮಾಲೋಚನೆಯಲ್ಲಿ ಐದು ಮಿಲಿಯನ್​ ಬ್ಯಾರೆಲ್​ ಕಚ್ಚಾ ತೈಲವನ್ನು ಬಿಡುಗಡೆ ಮಾಡಲಾಗುತ್ತದೆ. ಕಚ್ಚಾ ತೈಲದ ಬೆಲೆಯನ್ನು ತಗ್ಗಿಸುವ ಸಲುವಾಗಿ ಅಮೆರಿಕವು ಪೆಟ್ರೋಲಿಯಂ ನಿಕ್ಷೇಪಗಳನ್ನು ಬಿಡುಗಡೆ ಮಾಡಲು ನಿರ್ಧಾರ ಕೈಗೊಂಡ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕಾರ್ಯತಂತ್ರವು ಸರಿಯಾದ ರೀತಿಯಲ್ಲಿ ಅನುಷ್ಟಾನಕ್ಕೆ ಬಂದಲ್ಲಿ ಇಂಧನಗಳ ಬೆಲೆಯಲ್ಲಿ ಇನ್ನಷ್ಟು ಇಳಿಕೆ ಕಂಡು ಬರಲಿದೆ

ಕೇಂದ್ರ ಸರ್ಕಾರವು ನವೆಂಬರ್​ ಮೂರರಂದು ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಕ್ರಮವಾಗಿ ಐದು ಹಾಗೂ ಹತ್ತು ರೂಪಾಯಿ ಇಳಿಕೆ ಮಾಡಿತ್ತು.

Share This Article
Leave a comment