January 30, 2026

Newsnap Kannada

The World at your finger tips!

ambrish a

ಆನ್​ಲೈನ್​​ನಲ್ಲಿ ಸಾಲ ಪಡೆದ ವ್ಯಕ್ತಿ ಅಪಮಾನ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ

Spread the love

ಆನ್‌ಲೈನ್‌ನಲ್ಲಿ ಪಡೆದಿದ್ದ ಸಾಲ ಮರುಪಾವತಿಸದ ಆರೋಪ ಮಾಡಿ ಫೇಸ್‌ಬುಕ್‌ ಹ್ಯಾಕ್ ಮಾಡಿ ಎಲ್ಲರಿಗೂ ಅಶ್ಲೀಲ ಮೆಸೇಜ್ ಕಳಿಸಿ ಅವಮಾನ ಮಾಡಿದಕ್ಕೆ ಮನನೊಂದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನದ ಉದಯಗಿರಿ ಬಡಾವಣೆಯಲ್ಲಿ ನಡೆದಿದೆ.

ಅಂಬರೀಶ್​​ ಕೆ.ಸಿ (39) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಹಾಸನದ ಉದಯಗಿರಿ ಬಡಾವಣೆಯಲ್ಲಿ ಸೆಕ್ಯೂರಿಟಿ ಜೀನಿಯಸ್ ಎಂಬ ಏಜೆನ್ಸಿ ನಡೆಸುತ್ತಿದ್ದರು.

ಗುರುವಾರ ವಿಷ ಸೇವಿಸಿದ್ದ ಅಂಬರೀಶ್​ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

ಘಟನೆ ಕುರಿತಂತೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಅಂಬರೀಶ್​ ಆನ್​​ಲೈನ್​​​ನಲ್ಲಿ ಸಾಲ ಪಡೆದಿದ್ದರು ಇದರಿಂದ ಅವರ ಫೇಸ್​​ಬುಕ್​ ಖಾತೆಯನ್ನು ಅವರ ಸಂಪರ್ಕದಲ್ಲಿದ್ದ ಎಲ್ಲರಿಗೂ ಅವಾಚ್ಯ ಶಬ್ದಗಳಿಂದ, ಅಂಬರೀಶ್ ಅವರ ಫೋಟೋ ಎಡಿಟ್​ ಮಾಡಿ ಅಶ್ಲೀಲ ಮೆಸೇಜ್ ಮಾಡಿದ್ದರು ಎನ್ನಲಾಗಿದೆ. ಇದರಿಂದಲೇ ಮನನೊಂದ ಅಂಬರೀಶ್ ಆತ್ಮಹತ್ಯೆ ಶರಣಾಗಿದ್ದಾನೆ ಎನ್ನಲಾಗಿದೆ.

error: Content is protected !!