ವಿಕೃತ ಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ಖಾಯಂಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
200 7 ರಲ್ಲೇ ಸೆಷನ್ ಕೋಟ್ ೯ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ನಂತರ ಹೈಕೋರ್ಟ್ ,ಸುಪ್ರೀಂ ಕೋಟ್೯ ಕೂಡ ಗಲ್ಲು ಶಿಕ್ಷೆ ತೀರ್ಪನ್ನು ಖಾಯಂ ಮಾಡಿ ಆದೇಶ ಮಾಡಿತ್ತು. ರಾಷ್ಟ್ರಪತಿಗಳು ಕೂಡ ಕ್ಷಮಾಧಾನ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ್ದರು.
ವಿಕೃತಕಾಮಿ ಉಮೇಶ್ ರೆಡ್ಡಿ ಪುನಃ ಗಲ್ಲು ಶಿಕ್ಷೆ ಕಡಿತ ಮಾಡಿ, ಜೀವಾವಧಿ ಶಿಕ್ಷೆ ಯಾಗಿ ಪರಿವರ್ತನೆ ಮಾಡುವಂತೆ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನೂ ಕೂಡ ತಿರಸ್ಕರಿಸಿ, ಗಲ್ಲು ಶಿಕ್ಷೆ ಖಾಯಂ ಮಾಡಿ ಆದೇಶ ನೀಡಿದೆ.
ಬೆಂಗಳೂರಿನ ಜಯಶ್ರೀ ಎಂಬಾಕೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2007 ರಲ್ಲಿ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಸುಪ್ರೀಂ ಕೋರ್ಟ್ ಕೂಡ ಗಲ್ಲು ಶಿಕ್ಷೆ ಆದೇಶವನ್ನು ಎತ್ತಿಹಿಡಿದಿತ್ತು. ಗಲ್ಲು ಶಿಕ್ಷೆಯನ್ನು ಪರಿವರ್ತಿಸುವಂತೆ ಉಮೇಶ್ ರೆಡ್ಡಿ ಮನವಿ ಸಲ್ಲಿಸಿದ್ದ.
ಮೂಲತಃ ಚಿತ್ರದುರ್ಗ ಜಿಲ್ಲೆಯ ಉಮೇಶ್ ರೆಡ್ಡಿ ಜಿಲ್ಲಾ ಸಶಸ್ತ್ರ ಪಡೆಯ ಪೋಲಿಸ್ ಪೇದೆಯಾಗಿ 1996 ರಲ್ಲೇ ಆಯ್ಕೆ ಯಾಗಿದ್ದನು. ನಂತರ ಕೇಂದ್ರೀಯ ಮೀಸಲು ಪಡೆಗೆ ಆಯ್ಕೆ ಯಾಗಿ ಜಮ್ಮು ಕಾಶ್ಮೀರ ದ ಸೇನಾಧಿಕಾರಿಯ ನಿವಾಸದ ಕಾವಲುಗಾರನಾಗಿದ್ದ ವೇಳೆಯಲ್ಲಿ ಅಧಿಕಾರಿಯ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ವಿಫಲನಾಗಿದ್ದನು. ಅಲ್ಲಿಂದ ತಲೆ ತಪ್ಪಿಸಿಕೊಂಡು ಚಿತ್ರದುರ್ಗ ಕ್ಕೆ ಓಡಿ ಬಂದಿದ್ದನು.
ನಂತರ ಆತ ಸುಮಾರು 18 ಮಂದಿ ಮಹಿಳೆಯರ ಮೇಲೆ ವಿಕೃತವಾಗಿ ಅತ್ಯಾಚಾರ ಮಾಡಿ , ಕೊಲೆ ಮಾಡಿರುವ ಪ್ರಕರಣಗಳನ್ನು ಆರೋಪಿ ಉಮೇಶ್ ರೆಡ್ಡಿ ಒಪ್ಪಿಕೊಂಡಿದ್ದಾನೆ.
ಹೈಕೋರ್ಟ್ ನ ಇಂದಿನ ತೀರ್ಪು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಹೈಕೋರ್ಟ್ 6 ವಾರ ಮತ್ತೆ ಕಾಲಾವಕಾಶ ನೀಡಿದೆ. ಈಗಾಗಲೇ ಈತ ಕಳೆದ 10 ವರ್ಷಗಳಿಂದ ಜೈಲಿನಲ್ಲೇ ಇದ್ದಾನೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ