December 22, 2024

Newsnap Kannada

The World at your finger tips!

MP,mandya,election

Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ಉಪಕಾರ ಮಾಡಿದ್ದೇ ಬೇರೆಯವರು : ಬಿಲ್ಡಪ್ ತೆಗೆದುಕೊಂಡಿದ್ದೇ ಸಂಸದೆ ಸುಮಲತಾ : ಜನಾಕ್ರೋಷ ?

Spread the love

ಸಂಸದೆ ಸುಮಲತಾ ಕ್ರೆಡಿಟ್ ಪಾಲಿಟಿಕ್ಸ್ ಹೆಚ್ಚು ಆದ್ಯತೆ ನೀಡುತ್ತಾರೆ ಎಂಬ ಮಾತುಗಳು ಮಂಡ್ಯ ಕ್ಷೇತ್ರದಲ್ಲಿ ಕೇಳಿ ಬಂದಿವೆ

WhatsApp Image 2022 06 06 at 5.58.58 PM

ಇದನ್ನು ಓದಿ –ಮರಿತಿಬ್ಬೇಗೌಡ MLC ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ನಿಂದ ಗೆದ್ದು ತೋರಿಸಲಿ – ರೇವಣ್ಣ

ಯಾರೋ ಮಾಡಿದ ಕೆಲಸವನ್ನು ತಾನೇ ಮಾಡಿಕೊಂಡಂತೆ ಎಂದು ಬಿಲ್ಡಪ್ ತೆಗೆದುಕೊಳ್ಳತ್ತಾರೆಂಬ ಆರೋಪ ಅಸಲಿಯತ್ತಾಗಿದೆ

ಮೋದಿಗೆ ಪತ್ರ ಬರೆದ ಎರಡೇ ದಿನಕ್ಕೆ ಮಂಡ್ಯ ತಾಲೂಕು ನೂತನ್ ಎಂಬ ವಿಕಲಾಂಗನಿಗೆ ಆಧಾರ್ ಕಾರ್ಡ್ ಸಿಗುವಂತೆ ನಾನೇ ಮಾಡಿದ್ದು ಎಂದು FB ಯಲ್ಲಿ ಸುಮಲತಾ ಹೇಳಿದ್ದಾರೆ ನೂತನ್ ಸಮಸ್ಯೆಯನ್ನು
ನಾನೇ ಮೋದಿ ಗಮನಕ್ಕೆ ತಂದಂತೆ ಫೇಸ್ ಬುಕ್ ಫೋಸ್ಟ್ ಹಾಕಿಕೊಂಡ ಸಂಸದೆ ಸುಮಲತಾ.

WhatsApp Image 2022 06 06 at 5.44.13 PM

ಡಿಸಿಗೆ ಬರೆದ ಪತ್ರ ಪೋಸ್ಟ್ ಮಾಡಿ 3 ತಿಂಗಳ ಹಿಂದೆಯೇ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದೆ. ಆದರೆ ಯಾವುದೇ ಪರಿಹಾರ ಸಿಗಲಿಲ್ಲ. ಕೊನೆಗೆ ಮೋದಿ ಗಮನಕ್ಕೆ ತಂದ ಎರಡು ದಿನಕ್ಕೆ ಕಾರ್ಯರೂಪ ಪಡೆದಿದೆ.
ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಧನ್ಯವಾದ ಎಂದು ಸುಮಲಾ ಪೋಸ್ಟ್ ಹಾಕಿರುವ ಬಿಲ್ಡಪ್ ವಿಚಾರ ಚೆರ್ಚೆಗೆ ಗ್ರಾಸವಾಗಿದೆ

ಅಸಲಿ ಕಥೆಯೇ ಬೇರೆ :

2 ವರ್ಷದಿಂದ ಸಮಸ್ಯೆ ಆಧಾರ್ ಕಾರ್ಡ್ ಸಮಸ್ಯೆ ಪರಿಹಾರಕ್ಕಾಗಿ ಅಲೆಯುತ್ತಿತ್ತು ಅಂಗವಿಕಲ ನೂತನ್ ಕುಟುಂಬ. ಹಾಗೆಯೇ ಸಂಸದೆ ಸುಮಲತಾ ಅವರನ್ನೂ ಭೇಟಿ ಮಾಡಿ ಆಧಾರ್ ಕಾರ್ಡ್ ಸಮಸ್ಯೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದರು . ಆದರೆ ಸಂಸದೆ ಯಾವುದೇ ಸಮಸ್ಯೆಗೆ ಸ್ಪಂದಿಸದೇ ಕಾಟಾಚಾರಕ್ಕೆ ಒಂದು ಲೆಟರ್ ಹಾಕಿ ಕುಳಿತ್ತಿದ್ದರು

ನಂತರ ನೂತನ್ ಕುಟುಂದವರು ಚರ್ಮ ಕಾಯಿಲೆಯಿಂದಾಗಿ ಬಯೋಮೆಟ್ರಿಕ್ ನೀಡಲಾಗದೆ ಸಮಸ್ಯೆಯಾಗಿದ್ದ ಆಧಾರ್ ಕಾರ್ಡಗೆ ಎಷ್ಟೇ ಪ್ರಯತ್ನ ಮಾಡಿದರೂ ಸಮಸ್ಯೆಗೆ ಪರಿಹಾರ ಸಿಗದಿದ್ದಾಗ ರೈತ ಮುಖಂಡ ಮಧು ಚಂಧನ್ ಗಮನಕ್ಕೆ ತಂದಿದ್ದ ನೂತನ್ ಸಹೋದರಿ ಕಾವ್ಯ. ಎಲ್ಲಾ ಡಾಕ್ಯುಮೆಂಟ್ ಸಹಿತ ಮೋದಿಗೆ ಟ್ವೀಟ್ ಮಾಡಿದ್ದರು ರೈತ ಮುಖಂಡ ಮಧು ಚಂದನ್ ನಂತರ ಟ್ವೀಟ್ ಮಾಡಿದ 2 ದಿನಕ್ಕೆ ಅಂಗವಿಕಲನಿಗೆ ಆಧಾರ್ ಕಾರ್ಡ್ ಸಿಕ್ಕಿತ್ತು. ಇದು ಅಸಲಿ ಕಥೆ. ಬಿಲ್ಡಪ್ ಏನು ? FB ಪೇಜನ್ ನಲ್ಲಿ ಕಮೆಂಟ್ ಇತ್ಯಾದಿಗಳನ್ನು ನೋಡಬಹುದು.

Copyright © All rights reserved Newsnap | Newsever by AF themes.
error: Content is protected !!