ಮಡಿಕೇರಿ: ಕಾವೇರಿ ತೀರ್ಥೋದ್ಭವಕ್ಕೆ ಭಕ್ತರ ಪ್ರವೇಶ ನಿಬಂಧನೆ – ಆಕ್ರೋಶ

Team Newsnap
1 Min Read

ಕನ್ನಡ ನಾಡಿನ ಜೀವನದಿ ಕಾವೇರಿಯ ತೀರ್ಥೋದ್ಭವ ಅ.17ರಂದು ಭಾನುವಾರ ಮಧ್ಯಾಹ್ನ 1.11ಕ್ಕೆ ನಡೆಯಲಿದೆ.

kaveri river

ಕೋವಿಡ್ ನಿಬಂಧನೆಗಳ ನೆಪ ಹೇಳಿ ಭಕ್ತರಿಗೆ ತೀಥೋದ್ಭವ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಈ ನಿಬ೯ಂಧ ಕೊಡವರ ಭಾವನೆಗಳಗೆ ಧಕ್ಕೆ ತಂದಿದೆ ಎಂದು ಜನ ಆಕ್ರೋಶ ವ್ಯಕ್ತಡಿಸಿದ್ದಾರೆ.

ನಿಬಂಧನೆಗಳು ಏನು ?
ಭಕ್ತರು 72 ಗಂಟೆಯ ಕೋವಿಡ್ ನೆಗೆಟಿವ್ ವರದಿ ಪ್ರಮಾಣಪತ್ರ ಹಾಗೂ 1 ಡೋಸ್ ಲಸಿಕೆ ಪಡೆದಿರಬೇಕು, ಗುರುತಿನ ಚೀಟಿ ಕಡ್ಡಾಯಗೊಳಿಸಿದೆ. ಕೋವಿಡ್ ಇನ್ನೂ ದೂರವಾಗಿಲ್ಲ. ಹೀಗಾಗಿ ಕೆಲವು ನಿರ್ಬಂಧ ವಿಧಿಸುವುದು ಅನಿವಾರ್ಯ ಎಂದು ಜಿಲ್ಲಾ ಮಂತ್ರಿ ಪೂಜಾರಿ ಹೇಳಿದ್ದಾರೆ.

ಭಾಗಮಂಡಲದಿಂದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮಾತ್ರ ತೀರ್ಥೋದ್ಭವದ ವೇಳೆ ಅವಕಾಶ ಇರಲಿದೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಇದು ಭಕ್ತರ ಆಕ್ರೋಶ ಕಾರಣ ಆಗಿದೆ.


ಈಗಾಗಲೇ ಎಲ್ಲಾ ಚಟುವಟಿಕೆಗಳಿಗೂ ಅನುಮತಿ ನೀಡಲಾಗಿದೆ. ಆದರೆ ಕಾವೇರಿ ತೀರ್ಥೋದ್ಭವ ದರ್ಶನಕ್ಕೆ ನಿರ್ಬಂಧ ಹೇರಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಒಂದು ವೇಳೆ ನಿರ್ಬಂಧ ಸಡಿಲಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಕೊಡವರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Share This Article
Leave a comment