October 22, 2024

Newsnap Kannada

The World at your finger tips!

WhatsApp Image 2023 08 06 at 7.45.22 PM

ಕಡಲೆಕಾಯಿ (PEANUT)

Spread the love

ಕಡಲೆಕಾಯಿ ಎಂದರೆ “ಬಡವರ ಬಾದಾಮಿ” ಬಾದಾಮಿಯನ್ನು ಯಾರಿಗೆ ಕೊಂಡು ಕೊಳ್ಳಲು ಆಗುವುದಿಲ್ಲವೋ, ಅವರು ತಮ್ಮ ಪೌಷ್ಟಿಕಾಂಶವನ್ನು ಕಡಲೆಕಾಯಿಗಳನ್ನು ತಿನ್ನುವುದರ ಮೂಲಕ ಪಡೆದುಕೊಳ್ಳುತ್ತಾರೆ. ಕಡಲೆಕಾಯಿ ಅಂದರೆ ಹೇರಳವಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಕುರುಕಲು ತಿಂಡಿ, ಆದ್ದರಿಂದ ಇದನ್ನು “ಟೈಮ್ ಪಾಸ್ ಕಡಲೆಕಾಯಿ” ಅಂತ ಕೂಡಾ ಕರೆಯುತ್ತಾರೆ.

ಕಡಲೆ ಕಾಯಿಯನ್ನು ಹೇಗೆ ತಿಂದರೂ ರುಚಿಯೇ. ಹಸಿಯಾಗಿ, ಬೇಯಿಸಿ, ಹುರಿದು, ಹೇಗೆ ತಿಂದರೂ ಈ ಬಡವರ ಬಾದಾಮಿ ಬಾಯಿಗೆ ರುಚಿ ನೀಡುವುದರಲ್ಲಿ ಸಂದೇಹವಿಲ್ಲ. ಆದರೆ ಇದು ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಹಿತ.

ಯಾವುದೇ ಆರೋಗ್ಯ ಸಮಸ್ಯೆ ಉಂಟಾದರೂ ಕೂಡಾ ನೇರವಾಗಿ ನಾವು ರಾಸಾಯನಿಕಯುಕ್ತ ಔಷಧಿಗಳನ್ನು ತೆಗೆದುಕೊಳ್ಳಲು ಮುಂದಾಗುತ್ತೇವೆ. ನಿಸರ್ಗದತ್ತವಾಗಿ ಬಂದಿರುವ ಆರೋಗ್ಯ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬೇಕು ಎಂದು ಆಲೋಚಿಸಿ ನೋಡಿದರೆ ಮಾತ್ರೆ, ಔಷಧಿಗಳಿಗಿಂತ ಮನೆಮದ್ದುಗಳು ಹತ್ತುಪಟ್ಟು ವಾಸಿ ಎನಿಸುತ್ತದೆ.

ಕಡಲೆಕಾಯಿಯಲ್ಲಿ ವಿಟಮಿನ್ ಇ, ಮೆಗ್ನೀಸಿಯಮ್, ಫೋಲೇಟ್, ತಾಮ್ರ ಮತ್ತು ಅರ್ಜಿನೈನ್ ನಂತಹ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಅಲ್ಲದೇ ಕಡಲೆಕಾಯಿಯಲ್ಲಿರುವ ಪ್ರೋಟೀನ್ ಅಂಶವು ತೂಕವನ್ನು ಇಳಿಸಿಕೊಳ್ಳಲು ಮತ್ತು ಸ್ನಾಯುವಿನ ಶಕ್ತಿಯನ್ನು ಪಡೆಯಲು ಪ್ರಯತ್ನಿಸುವವರಿಗೆ ಉತ್ತಮ ಆಹಾರವಾಗಿದೆ.

ಸುಮಾರು 100 ಗ್ರಾಂ ಕಡಲೆಕಾಯಿಯು ಸರಿಸುಮಾರು 567 ಕ್ಯಾಲೋರಿಗಳು, 25.8 ಗ್ರಾಂ ಪ್ರೋಟೀನ್, 49.2 ಗ್ರಾಂ ಕೊಬ್ಬು, 16.1 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 8.5 ಗ್ರಾಂ ಫೈಬರ್ ಅಂಶವನ್ನು ಹೊಂದಿರುತ್ತದೆ.

ಕಡಲೆಕಾಯಿ ಉಪಯೋಗಗಳು :

ಹಸಿ ಕಡಲೆ ಬೀಜ ಅಥವಾ ಹುರಿದು ತಿನ್ನುವುದಕ್ಕಿಂತ ಕಡಲೆ ಬೀಜಗಳನ್ನು ನೆನೆಸಿ ಆಗಾಗ ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯದ ಲಾಭಗಳು ಜಾಸ್ತಿ.

ನೆಲಗಡಲೆ ಹಸಿವನ್ನು ನಿಗ್ರಹಿಸುವ ಅಂಶವೂ ಹೌದು. ಫೈಬರ್ ಅಂಶದಿಂದಾಗಿ ಇದು ದೀರ್ಘಕಾಲದವರೆಗೆ ಹಸಿವನ್ನು ತಡೆಯುತ್ತದೆ. ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.

ಪ್ರತಿದಿನವೂ ಒಂದು ಮುಷ್ಠಿಯಷ್ಟು ಕಡಲೆ ಬೀಜಗಳನ್ನು ತಿನ್ನುತ್ತಾ ಬಂದರೆ ಇದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಈ ಗುಣ ಮಧುಮೇಹಿಗಳಿಗೆ ವರದಾನವಾಗಿದೆ. ಇದರ ಆಂಟಿ ಆಕ್ಸಿಡೆಂಟ್ ಗುಣ ಅಧಿಕ ರಕ್ತದ ಸಕ್ಕರೆಯಿಂದ ಎದುರಾಗಿದ್ದ ರಕ್ತನಾಳಗಳ ಶಿಥಿಲತೆಯ ವಿರುದ್ದ ಕೆಲಸ ಮಾಡುತ್ತದೆ.

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ವ್ಯಾಯಾಮದಲ್ಲಿ ನಿರತರಾಗಿರುವವರು ತಮ್ಮ ದೇಹದಲ್ಲಿ ಯಾವುದೇ ಶಕ್ತಿ ಹಾಗೂ ಚೈತನ್ಯವನ್ನು ಕಳೆದುಕೊಳ್ಳದಂತೆ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕರಗಿಸಬೇಕು ಎಂದರೆ ವ್ಯಾಯಾಮದ ಮುಂಚೆ ನೆನೆಸಿದ ಕಡಲೆ ಬೀಜಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು.

ಆಹಾರದಲ್ಲಿ ಸ್ವಲ್ಪ ಪ್ರಮಾಣದ ಕಡಲೆಕಾಯಿಯನ್ನು ಸೇರಿಸುವುದರಿಂದ ಮೆದುಳಿನ ಶಕ್ತಿಯನ್ನು ಸುಧಾರಿಸಬಹುದು. ಇದು ಮೆಮೊರಿ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.

ನೆಲಗಡಲೆಯಲ್ಲಿ ನಾರಿನಂಶ ಹೇರಳವಾಗಿದ್ದು, ಕರುಳು ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ, ಮಲ ಮೂತ್ರದ ಸಮಸ್ಯೆಯನ್ನೂ ನಿವಾರಿಸುತ್ತದೆ.

ಕಡಲೆಕಾಯಿಯನ್ನು ಪ್ರತಿದಿನ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ಅಡ್ಡ ಪರಿಣಾಮಗಳು ಅಂದರೆ, ಅತಿಯಾದ ಕಡಲೆ ಕಾಯಿಯ ಸೇವನೆಯಿಂದ

ಪಿತ್ತ ಜಾಸ್ತಿ ಆಗುವುದು.

ಕೆರತ ಬರಬಹುದು.

ಕಡಲೆ ಕಾಯಿ ಎಣ್ಣೆಯನ್ನು ಅಧಿಕವಾಗಿ ಬಳಸಬಾರದು.

ಗ್ಯಾಸ್ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

Copyright © All rights reserved Newsnap | Newsever by AF themes.
error: Content is protected !!