ಮಂಡ್ಯದಲ್ಲಿ ರೈತರಿಂದ PAY FARMER ಅಭಿಯಾನ ಆರಂಭ

Team Newsnap
1 Min Read
PAY FARMER campaign started by farmers in Mandya ಮಂಡ್ಯದಲ್ಲಿ ರೈತರಿಂದ PAY FARMER ಅಭಿಯಾನ ಆರಂಭ

ರಾಜ್ಯ ರೈತರು ತಮ್ಮ ಬೆಳೆಗೆ ವೈಜ್ಞಾನಿಕ ಬೆಲೆ ನೀಡಿ ಎಂದು ಮಂಡ್ಯದಲ್ಲಿ PAY FARMER ಅಭಿಯಾವನ್ನು ಆರಂಭಿಸಿದ್ದಾರೆ.

ರೈತರು ಮಂಡ್ಯದ ಸಂಜಯ್ ವೃತ್ತದಲ್ಲಿ PAY FARMER ಅಭಿಯಾನ ನಡೆಸಿದ್ದಾರೆ, ಬೆಂ-ಮೈ ಹೆದ್ದಾರಿಯಲ್ಲಿ PAY FARMER ಪೋಸ್ಟ್ ಹಿಡಿದು ನಿಂತಿದ್ದಾರೆ.ಇದನ್ನು ಓದಿ –‘ಮೈಸೂರು ರೇಷ್ಮೆ ಸೀರೆ’ ಉಟ್ಟು ದಸರಾಗೆ ಚಾಲನೆ ಕೊಟ್ಟ ರಾಷ್ಟ್ರಪತಿ : ಬೆಲೆ ಎಷ್ಟು ಗೊತ್ತಾ ?

ಅಲ್ಲದೇ ರೈತ ಬೆಳೆದ ಬೆಳೆಗಾಗಿ ಕಾರು, ಹೆದ್ದಾರಿಯ ಗೋಡೆ ಹಾಗೂ ಸಾರಿಗೆ ಬಸ್ ನಿಲ್ದಾಣದ ಗೋಡೆಗಳ ಮೇಲೆ PAY FARMER ಪೋಸ್ಟ್ ಅಂಟಿಸಿದ್ದಾರೆ.

ಯುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ PAY FARMER ಅಭಿಯಾನ ಆರಂಭವಾಗಿದ್ದೆ

ಹೆದ್ದಾರಿಯಲ್ಲಿ KSRTC, ಐರಾವತ, ರಾಜಹಂಸ ಬಸ್ ಗಳ ತಡೆದು PAY FARMER ಪೋಸ್ಟ್ ಅಂಟಿಸಿ ಸರ್ಕಾರದ ವಿರುದ್ದ ರೈತರ ಆಕ್ರೋಶ ಹೊರ ಹಾಕಿದ್ದಾರೆ.

ಟನ್ ಕಬ್ಬಿಗೆ 4,500 ರು ನಿಗದಿ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಇಲ್ಲದಿದ್ದರೆ ದಸರಾದಲ್ಲಿ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ರೈತ ಮುಖಂಡ ದರ್ಶನ್ ಪುಟ್ಟಣಯ್ಯ, ಸೇರಿದಂತೆ ಹಲವರು ಭಾಗಿಯಾಗಿದ್ದರು.

ರಾಜಕೀಯ ಪಕ್ಷಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಅವರಿಗೆ ರೈತರ ಸಂಕಷ್ಟ, ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ. ರಾಜಕೀಯ ಲಾಭಕ್ಕಾಗಿ ಅಭಿಯಾನಗಳನ್ನು ಮಾಡ್ತಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a comment