ರೈತರು ಮಂಡ್ಯದ ಸಂಜಯ್ ವೃತ್ತದಲ್ಲಿ PAY FARMER ಅಭಿಯಾನ ನಡೆಸಿದ್ದಾರೆ, ಬೆಂ-ಮೈ ಹೆದ್ದಾರಿಯಲ್ಲಿ PAY FARMER ಪೋಸ್ಟ್ ಹಿಡಿದು ನಿಂತಿದ್ದಾರೆ.ಇದನ್ನು ಓದಿ –‘ಮೈಸೂರು ರೇಷ್ಮೆ ಸೀರೆ’ ಉಟ್ಟು ದಸರಾಗೆ ಚಾಲನೆ ಕೊಟ್ಟ ರಾಷ್ಟ್ರಪತಿ : ಬೆಲೆ ಎಷ್ಟು ಗೊತ್ತಾ ?
ಅಲ್ಲದೇ ರೈತ ಬೆಳೆದ ಬೆಳೆಗಾಗಿ ಕಾರು, ಹೆದ್ದಾರಿಯ ಗೋಡೆ ಹಾಗೂ ಸಾರಿಗೆ ಬಸ್ ನಿಲ್ದಾಣದ ಗೋಡೆಗಳ ಮೇಲೆ PAY FARMER ಪೋಸ್ಟ್ ಅಂಟಿಸಿದ್ದಾರೆ.
ಯುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ PAY FARMER ಅಭಿಯಾನ ಆರಂಭವಾಗಿದ್ದೆ
ಹೆದ್ದಾರಿಯಲ್ಲಿ KSRTC, ಐರಾವತ, ರಾಜಹಂಸ ಬಸ್ ಗಳ ತಡೆದು PAY FARMER ಪೋಸ್ಟ್ ಅಂಟಿಸಿ ಸರ್ಕಾರದ ವಿರುದ್ದ ರೈತರ ಆಕ್ರೋಶ ಹೊರ ಹಾಕಿದ್ದಾರೆ.
ಟನ್ ಕಬ್ಬಿಗೆ 4,500 ರು ನಿಗದಿ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಇಲ್ಲದಿದ್ದರೆ ದಸರಾದಲ್ಲಿ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ರೈತ ಮುಖಂಡ ದರ್ಶನ್ ಪುಟ್ಟಣಯ್ಯ, ಸೇರಿದಂತೆ ಹಲವರು ಭಾಗಿಯಾಗಿದ್ದರು.
ರಾಜಕೀಯ ಪಕ್ಷಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಅವರಿಗೆ ರೈತರ ಸಂಕಷ್ಟ, ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ. ರಾಜಕೀಯ ಲಾಭಕ್ಕಾಗಿ ಅಭಿಯಾನಗಳನ್ನು ಮಾಡ್ತಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು