ನವದೆಹಲಿ : ಲೋಕಸಭಾ ಕಲಾಪಕ್ಕೆ ನುಗ್ಗಿದ ಅಪರಿಚಿತರು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದಿರುವ ಮಾಹಿತಿ ಲಭ್ಯವಾಗಿದೆ .
ಈ ಇಬ್ಬರು ಅಪರಿಚಿತರ ಪೈಕಿ ಒಬ್ಬ ಸಾಗರ್ ಶರ್ಮ ಎಂಬಾತನು ಮೈಸೂರಿನ ವಿಜಯನಗರ ಬಡಾವಣೆಯ ನಿವಾಸಿ. ಈತ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದ ಎನ್ನಲಾಗಿದೆ
ಪಾಸ್ ಪಡೆದು ಲೋಕಸಭಾ ವೀಕ್ಷಕರ ಗ್ಯಾಲರಿಗೆ ಎಂಟ್ರಿ ಕೊಟ್ಟಿದ್ದರು. ಆ ಪಾಸ್‌ಗಳನ್ನು ಮೈಸೂರು-ಕೊಡಗು ಸಂಸದರಾಗಿರುವ ಪ್ರತಾಪ್ಸಿಂಹ ಅವರ ಕಚೇರಿಯಿಂದ ಪಡೆದಿದ್ದರು ಲೋಕಸಭೆ ಭದ್ರತಾ ವೈಫಲ್ಯ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಅಪರಿಚಿತರನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಇಬ್ಬರು ಅಪರಿಚಿತರು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದರು ಎನ್ನಲಾಗಿದೆ.
ಲೋಕಸಭೆ ಒಳಗೆ ನುಗ್ಗಿರುವ ಇಬ್ಬರು ಅಪರಿಚಿತರು ಮೈಸೂರು-ಕೊಡಗು ಸಂಸದರಾಗಿರುವ ಪ್ರತಾಪ್ಸಿಂಹ ಅವರಿಂದ ಕಾಡಿ ಬೇಡಿ ಪಾಸ್ ಪಡೆದುಕೊಂಡಿದ್ದರು ಎನ್ನಲಾಗಿದೆ.
ಲೋಕಸಭೆಗೆ ನುಗ್ಗಿದ ದುಷ್ಕರ್ಮಿಗಳ ಗುರುತು ಪತ್ತೆಯಾಗಿದೆ.ಲೋಕಸಭೆ ಕಲಾಪದ ವೇಳೆ ಸ್ಫೀಕರ್ ಛೇರ್ ನತ್ತ ನುಗ್ಗಿದ ದುಷ್ಕರ್ಮಿಗಳು – ಭಾರಿ ಆತಂಕ
ಮೈಸೂರು ಮೂಲದ ಇಂಜನಿಯರ್ ಆಗಿರುವ ಮನೋರಂಜನ್ ಮತ್ತು ಸಾಗರ್ ಶರ್ಮ ಎಂದು ಹೇಳಲಾಗಿದೆ
More Stories
4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ
ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ