ರಾಜ್ಯ ಮತ್ತು ಜಿಲ್ಲೆಯ ಹಿತದೃಷ್ಟಿಯಿಂದ ಬೆಳಗಾವಿನ ವಿಭಜನೆಯ ಬಗ್ಗೆ ಸೂಕ್ತ ತೀರ್ಮಾನ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ಜಿಲ್ಲೆಯ ವಿಭಜನೆಗೆ ಇನ್ನೂ ಯಾವುದೇ ನಿರ್ಣಯ ಮಾಡಿಲ್ಲ. ಬೆಳಗಾವಿ ವಿಭಜನೆ ಅನೇಕ ವರ್ಷಗಳಿಂದ ಚರ್ಚೆಯಲ್ಲಿದೆ. ಎರಡು, ಮೂರು ಜಿಲ್ಲೆಗಳ ಬಗ್ಗೆ ಪ್ರಸ್ತಾಪವಿದೆ. ಗಡಿಭಾಗದ ಜಿಲ್ಲೆ ಇದ್ದು ಬೇಡ ಎಂದು ಅಂದಿನ ಸಿಎಂ ಜೆ.ಎಚ್.ಪಟೇಲ್ ಇದ್ದಾಗ ಹೇಳಿದ್ದರು ಈಗ ಮತ್ತೆ ಜನರ ತಮ್ಮ ಒತ್ತಾಸೆಯನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ, ಜಿಲ್ಲೆ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನ ಮಾಡುತ್ತೇನೆ ಎಂದರು.
ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಯಾವಾಗ ಚರ್ಚೆಗೆ ಕರೆಯುತ್ತೋ ಅಂದು ಹೋಗಿ ಈ ಕುರಿತು ಚರ್ಚೆ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ಚೀಫ್ ಜಸ್ಟಿಸ್ ಸಮಾವೇಶದಲ್ಲಿ ಪಾಲ್ಗೊಂಡು ವಾಪಸ್ ಬರುತ್ತೇನೆ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಯಾವಾಗ ಚರ್ಚೆಗೆ ಕರೆಯುತ್ತೋ ಅಂದು ಹೋಗಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
More Stories
ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
ಕಾಂಗ್ರೆಸ್ನಲ್ಲೂ ಪರಷತ್ ಟಿಕಟ್ ಗೆ ಜೋರಾಯ್ತು ಗಲಾಟೆ – ಡಿಕೆಶಿ , ಸಿದ್ದು ದೆಹಲಿಗೆ
ಧಾರವಾಡ ಬಳಿ ಭೀಕರ ರಸ್ತೆ ಅಪಘಾತ : ಮರಕ್ಕೆ ಕ್ರೂಸರ್ ಡಿಕ್ಕಿ 8 ಮಂದಿ ಸ್ಥಳದಲ್ಲೇ ಸಾವು