ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ ಯುವಕನ ಪೋಷಕರು ಗ್ರಾಮದಿಂದ ಪರಾರಿ

Team Newsnap
1 Min Read

ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪು ಕೋಟೆ ಮೇಲೆ ನಿಸಾನ್ ಸಾಹಿಬ್ ಧ್ವಜ‌ ಹಾರಿಸಿದ ಯುವಕ‌‌ನ ಪೋಷಕರು ಬಂಧನ ಭೀತಿಯಿಂದ ಗ್ರಾಮವನ್ನೇ ತೊರೆದು ಹೋಗಿದ್ದಾರೆ.

ಅಂದು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ 23 ವರ್ಷದ ಜುಗ್ ರಾಜ್ ಸಿಂಗ್ ಪಂಜಾಬ್ ನ ವಾನತಾರ ಗ್ರಾಮದವರು. ಪೋಲಿಸರು ಯುವಕ ನ ಹುಡುಕಾಟದಲ್ಲಿ ತೊಡಗಿದ್ದಾರೆ. ಹೀಗಾಗಿ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಭಾವಿಸಿ ಪೋಷಕರು ಗ್ರಾಮ ತೊರೆದಿದ್ದಾರೆ.

ಈಗಾಗಲೇ ಪೋಲಿಸರು ಹಲವು ಬಾರಿ ದಾಳಿ ಮಾಡಿದರೂ ಕೂಡ ಆತನ ಅಜ್ಜ ‌ಮೆಹಲ್ ಸಿಂಗ್ ಹೊರತು ಪಡಿಸಿ ಯಾರೂ ಇಲ್ಲ.

ಈ ಪ್ರಕರಣದಲ್ಲಿ ಜುಗ್ ರಾಜ್ ಸಿಂಗ್ ಧ್ವಜ‌ ಹಾರಿಸುವಂತೆ ಪ್ರೇರಣೆ ನೀಡಿದವರು‌ ಯಾರು ಎಂಬುದನ್ನು ಕೇಂದ್ರ ಸರ್ಕಾರ ರಚನೆ ಮಾಡಿರುವ ಎಸ್ ಐ ಟಿ ಪತ್ತೆ ಮಾಡಲು ಮುಂದಾಗಿದೆ.

ಧ್ವಜ ಹಾರಿಸಿದ ಹಾಗೂ ಗಲಭೆಗೆ ಪ್ರಚೋದನೆ ನೀಡಿದವರಿಗೂ ನೋಟಿಸ್ ಜಾರಿ ಮಾಡಿರುವ ವಿಶೇಷ ತನಿಖಾ ದಳ ( ಎಸ್ ಐ ಟಿ) ತನಿಖೆ ಚುರುಕುಗೊಳಿಸಿದೆ.

Share This Article
Leave a comment