December 27, 2024

Newsnap Kannada

The World at your finger tips!

t20

ಟಿ20 ವಿಶ್ವಕಪ್​​ ಪಂದ್ಯಕ್ಕೂ ಮುನ್ನವೇ ಭಾರತದ ಎದುರು ಪಾಕಿಸ್ತಾನ ಮಂಡಿಯೂರಿದೆ

Spread the love

ಟಿ20 ವಿಶ್ವಕಪ್​​ ಪಂದ್ಯಕ್ಕೂ ಮುನ್ನವೇ ಭಾರತದ ಎದುರು ಪಾಕಿಸ್ತಾನ ಕೊನೆಗೂ ಮಂಡಿಯೂರಿದೆ.

ಟಿ20 ವಿಶ್ವಕಪ್​ಗೆ ಜೆರ್ಸಿ ವಿಚಾರವಾಗಿ ಪಾಕಿಸ್ತಾನ ವಿರುದ್ಧ ಎದ್ದಿದ್ದ ವಿವಾದ ಇದೀಗ ಸುಖಾಂತ್ಯ ಕಂಡಿದೆ.

ನಾಳೆಯಿಂದ ಆರಂಭವಾಗಲಿರುವ ಟಿ20 ವಿಶ್ವಕಪ್​ಗೆ ಕೊರೊನಾ ಕಾರಣದಿಂದ ಯುಎಇನಲ್ಲಿ ಆಯೋಜನೆ ಮಾಡಲಾಗಿದೆ ಭಾರತವೇ ಟೂರ್ನಿಯ ಆತಿಥ್ಯ ವಹಿಸಿಕೊಂಡಿದೆ.

ಇದರಿಂದ ಎಲ್ಲಾ ತಂಡಗಳು ತಮ್ಮ ಜೆರ್ಸಿ ಮೇಲೆ ‘ICC’Men’s T20 World Cup India ‘2021’ ಎಂದು ಹೆಸರು ಉಲ್ಲೇಖಿಸಬೇಕು.

ಆದರೆ ಪಾಕಿಸ್ತಾನ ಮಾತ್ರ ತಮ್ಮ ಜರ್ಸಿ ಮೇಲೆ ‘T20 World Cup UAE 2021’ ಎಂದು ಮುದ್ರಿಸಿತ್ತು.

ಇದರ ಫೋಟೋಗಳು ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಲ್ಲದೆ, ಆಕ್ರೋಶಕ್ಕೂಕಾರಣವಾಗಿತ್ತು.

ತಂಡದ ವಿರುದ್ಧ ಆಕ್ರೋಶವ್ಯಕ್ತವಾಗುತ್ತಿದ್ದಂತೆ ಪಾಕಿಸ್ತಾನ ಇಂದು ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. ತಮ್ಮ ಸಮವಸ್ತ್ರದಲ್ಲಿ ಇಂಡಿಯಾ-2021 ಎಂದು ಉಲ್ಲೇಖ ಕೂಡ ಮಾಡಿ ತಮ್ಮ ತಪ್ಪನ್ನ ತಿದ್ದಿಕೊಂಡಿದೆ.

ಜೆರ್ಸಿ ಅನಾವರಣದ ವಿಡಿಯೋವನ್ನು ಪಿಸಿಬಿ ಅಧಿಕೃತ ಟ್ವಿಟರ್​​​ನಲ್ಲಿ ಅನಾವರಣಗೊಳಿಸಿ ವಿವಾದಕ್ಕೆ ಫುಲ್​​​ಸ್ಟಾಪ್ ಇಟ್ಟಿದೆ.

Copyright © All rights reserved Newsnap | Newsever by AF themes.
error: Content is protected !!