ಅಘ್ಘಾನ್ ನಲ್ಲಿ ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ ಘೋಷಣೆ

Team Newsnap
1 Min Read
Taliban thanked India for helping through Afghanistan earthquake

ಅಫ್ಘಾನಿಸ್ತಾನದಲ್ಲಿನ ಸರ್ಕಾರವನ್ನು ಕೆಡವಿ ರಚನೆ ಮಾಡಲಾದ ಉಗ್ರರ ಸರ್ಕಾರವನ್ನು ವಿಶ್ವವೇ ಕಟುವಾಗಿ ಟೀಕೆ ಮಾಡುವಾಗ ಪಾಕಿಸ್ತಾನ, ಚೀನಾ, ಇರಾನ್ ಮಾತ್ರ ತಾಲಿಬಾನ್ ಸರ್ಕಾರವನ್ನು ಸ್ವಾಗತಿಸಿವೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್, ತಾಲಿಬಾನ್ ಸಂಘಟನೆಯು ಗುಲಾಮಗಿರಿಯ ಸಂಕೋಲೆಯನ್ನು ತುಂಡರಿಸಿದೆ ಎಂದು ವಿಶ್ಲೇಷಿಸಿದ್ದಾರೆ.

ಇಂಗ್ಲಿಷ್ ಶಾಲೆಗಳಿಂದ ಅಫ್ಘಾನ್ ಸಂಸ್ಕೃತಿ ನಾಶವಾಗುತ್ತಿತ್ತು ಎಂದು ಹೇಳಿದ್ದಾರೆ.

ನೀವು ಮತ್ತೊಂದು ಸಂಸ್ಕೃತಿಯನ್ನು ನಿಮ್ಮದಾಗಿಸಿಕೊಂಡು ಮಾನಸಿಕವಾಗಿ ಅಡಿಯಾಳಾಗುತ್ತೀರಿ. ಇದು ನಿಜವಾದ ಗುಲಾಮಗಿರಿಗಿಂತಲೂ ಕೆಟ್ಟದ್ದು. ಈಗ ತಾಲಿಬಾನ್ ಆ ಗುಲಾಮಗಿರಿಯ ಸಂಕೋಲೆಯನ್ನು ತುಂಡರಿಸಿದೆ ಎಂದು ಬಣ್ಣಿಸಿದ್ದಾರೆ.

ಅಫ್ಘಾನಿಸ್ತಾನದ ಬಗ್ಗೆ ಚೀನಾ ಸರ್ಕಾರದ ವಕ್ತಾರರು ಪ್ರತಿಕ್ರಿಯಿಸಿ, ನಾವು ಹೊಸ ಸರ್ಕಾರಕ್ಕೆ ಸಹಕಾರ ನೀಡಲಿದ್ದೇವೆ. ತಾಲಿಬಾನ್ ಜತೆ ಸಹಕಾರ ಹಾಗೂ ಸ್ನೇಹ ಸಂಬಂಧ ಇರಿಸಿಕೊಳ್ಳಲು ನಾವು ಸಿದ್ಧವಾಗಿದ್ದೇವೆ ಎಂದಿದ್ದಾರೆ. 

ಅಫ್ಘಾನಿಸ್ತಾನದ ಜತೆ ಚೀನಾ 76 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆ. ಚೀನಾದಲ್ಲಿ ಉಯಿಘರ್ ಮುಸ್ಲಿಮರಿದ್ದಾರೆ. ಈ ಹಿಂದೆ ಉಯಿಘುರ್ ಮುಸ್ಲಿಮವರು ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟು ದಾಳಿ ಮಾಡಿದ ಹಿನ್ನೆಲೆಯಲ್ಲಿ ಇವರನ್ನು ಚೀನಾ ಕಟುವಾಗಿ ನಡೆಸಿಕೊಳ್ಳುತ್ತಿದೆ. ಈ ವಿಚಾರದ ಬಗ್ಗೆ ವಿಶ್ವದ ಮುಸ್ಲಿಮ್ ರಾಷ್ಟ್ರಗಳು ಮಾನವ ಹಕ್ಕುಗಳ ಉಲ್ಲಘನೆ ಆಗುತ್ತಿದೆ ಎಂದು ದೂರುತ್ತಿದೆ. ಈ ಅಪವಾದದಿಂದ ಮುಕ್ತರಾಗಲು ಚೀನಾ ತಾಲಿಬಾನಿಯರನ್ನು ಬೆಂಬಲಿಸುತ್ತಿದ್ದಾರೆ.

Share This Article
Leave a comment