ಮಂಡ್ಯದ ಪೇಟೆ ಬೀದಿಯಲ್ಲಿರುವ ಪದ್ಮಾಂಬ ಟ್ರೇಡರ್ಸ್ ಮಾಲೀಕ ಪದ್ಮನಾಭಯ್ಯ ಭಾನುವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾದರು.
ಕೆಲ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಪದ್ಮನಾಭಯ್ಯ( 65) ನವರು ಪತ್ನಿ, ಪುತ್ರ ರವಿ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ಬೆಳ್ಳೂರಿನವರಾದ ಪದ್ಮನಾಭಯ್ಯ ನವರ ತಂದೆ ಸನತ್ ಕುಮಾರ್ ಅವರು ಅಡಕೆ ವ್ಯಾಪಾರಕ್ಕಾಗಿ ಮಂಡ್ಯದ ಪೇಟೆ ಬೀದಿಗೆ ಬಂದು ನೆಲೆಯೂರಿದ್ದರು. ನಂತರ ದಿನಸಿ ವ್ಯಾಪಾರ ಆರಂಭಿಸಿ ಖ್ಯಾತ ಉದ್ಯಮಿಗಳು ಆದರು.
ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪದ್ಮನಾಭಯ್ಯ, ದಾನ ಧರ್ಮ ಮಾಡಿ ಹೃದಯವಂತಿಕೆ ತೋರುತ್ತಿದ್ದರು. ಜೈನ ಸಮಾಜದಲ್ಲಿಯೇ ಕೊಡುಗೈ ದಾನಿಯಾಗಿ ಖ್ಯಾತಿಗಳಿಸಿದ್ದರು.
ನಾಳೆ ಬೆಳಿಗ್ಗೆ 11ಗಂಟೆಗೆ ಮಂಡ್ಯ ದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.
More Stories
KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ
ಐಶ್ವರ್ಯಗೌಡ ವಂಚನೆ ಪ್ರಕರಣ: ಶಾಸಕ ನರೇಂದ್ರಸ್ವಾಮಿಯ ಕೈವಾಡ ಶಂಕೆ, ಅನ್ನದಾನಿಯ ಗಂಭೀರ ಆರೋಪ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು