ಪದ್ಮಶ್ರೀ ಪುರಸ್ಕೃತ, ಭಾವೈಕ್ಯತೆಯ ಹರಿಕಾರ , ಕನ್ನಡದ ಕಬೀರ ಇಬ್ರಾಹಿಂ ಸುತಾರ್ ಇನ್ನಿಲ್ಲ

Team Newsnap
1 Min Read

ಪದ್ಮಶ್ರೀ ಪುರಸ್ಕೃತ, ಆಧುನಿಕ ಸೂಫಿಸಂತ ಇಬ್ರಾಹಿಂ ಎನ್.ಸುತಾರ್ (82) ಶನಿವಾರ ಬೆಳಗ್ಗೆ 6.30ಕ್ಕೆ ಹೃದಯಾಘಾತದಿಂದ ಅಸ್ಪತ್ರೆಯಲ್ಲಿ ನಿಧನರಾದರು.

ಇಬ್ರಾಹಿಂ ಎನ್. ಸುತಾರ್ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ನಿವಾಸಿ.ಮೇ 10, 1940 ರಲ್ಲಿ ಜನಿಸಿದ್ದ ಇಬ್ರಾಹಿಂ ನಬೀ ಸಾಹೇಬ್ ಸುತಾರ್, ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳಲ್ಲಿ ಜನಪ್ರಿಯತೆ ಗಳಿಸಿದ್ದರು.

ಕನ್ನಡದ ಕಬೀರ ಎಂದೇ ಇವರು ಖ್ಯಾತರಾಗಿದ್ದ ಕಾರಣಕ್ಕೆ ಭಾರತ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 1995ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತ್ತು.

ತಂದೆ ಮಹಾಲಿಂಗಪುರದ ನಬಿಸಾಹೆಬ್, ತಾಯಿ ಅಮೀನಾಬಿ. ಬಡತನದಿಂದಾಗಿ ಶಿಕ್ಷಣವನ್ನು ಮೂರನೇ ತರಗತಿಯವರೆಗೆ ಮಾತ್ರ ಕಲಿತರು. ನಂತರ ನೇಕಾರಿಕೆ ಕಲಿತು ಬದುಕು ಸಾಗಿಸತೊಡಗಿದ್ದರು.

ಬಾಲ್ಯದಲ್ಲಿ ಮಸೀದಿಯಲ್ಲಿ ನಮಾಜು ಕಲಿತು ಕುರಾನ್ ಅಧ್ಯಯನ ಮಾಡಿದರು. ಬೇರೆ ಧರ್ಮಗಳನ್ನು ತಿಳಿಯಬಯಸಿದರು.

ಊರಿನ ಭಜನಾಸಂಘದಲ್ಲಿ ಪಾಲ್ಗೊಂಡು ತತ್ವಪದ, ವಚನಗಳನ್ನು ಕಲಿತರು. ಪ್ರವಚನಗಳನ್ನು ಕೇಳಿದರು. ನಿಜಗುಣಯೋಗಿಗಳ ಶಾಸ್ತ್ರ, ಭಗವದ್ಗೀತೆಗಳ ಅಧ್ಯಯನ ಮಾಡಿದ್ದರು. ದೇವರು, ಧರ್ಮ ಬೇರೆ ಆದರೂ ಸತ್ಯ ಒಂದೇ ಎಂದು ಅರಿತರು.

Share This Article
Leave a comment