ವಾರದ ಕಥೆ: ಮಾಲೀಕತ್ವ

Team Newsnap
3 Min Read
Ownership ವಾರದ ಕಥೆ: ಮಾಲೀಕತ್ವ
WhatsApp Image 2023 05 27 at 5.29.12 PM
ಜಯಶ್ರೀ ಪಾಟೀಲ್

ಮಗಳ ಮನೆಗೆ ತಂದೆ ಅತಿಥಿಯಂತೆ ಬಂದು ಕುಳಿತಿದ್ದರು. ಮಗಳು ಹಣ್ಣು ಮತ್ತು ನೀರು ತಂದು ಕೊಟ್ಟಳು ತನ್ನ ತಂದೆಗೆ. ಮಗಳ ಮಾವನೊಂದಿಗೆ ಹರಟೆ ಹೊಡೆಯುತ್ತಕುಳಿತಿದ್ದರು, ಎಲ್ಲರೂ ಕಪಿಲ(ಅಳಿಯ) ಬರುವುದನ್ನೇ ಕಾಯುತ್ತಿದ್ದರು. ಮಗಳ ತುಂಬು ಮನೆ, ಮನೆಯ ಸಂಪತ್ತು, ಜನರ ಹೃದಯವಂತಿಕೆಯ ಸಂಪತ್ತು ನೋಡಿ ತಂದೆಗೆ ಖುಷಿಯಾಯಿತು.

ಮಗಳ ಆಯ್ಕೆ ಮತ್ತು ನಿರ್ಧಾರ ತಪ್ಪಿಲ್ಲ, ಕಪಿಲ ನನ್ನು ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಸಾಕಷ್ಟು ವಿರೋಧ, ತಂಟೆ ,ತಕರಾರು, ಗೊಂದಲ..ಕೊನೆಗೆ ಮಗಳು ಬಯಸಿದಂತೆ ಅವಳ ಇಚ್ಛೆ ಪೂರ್ಣಮಾಡಿ ತಂದೆಯ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ಮಾಡಿಮುಗಿಸಿದರು .

ಮಗಳ ಮನೆಯಲ್ಲಿ ತುಂಬಾ ಹೊತ್ತು ಕೂರುವುದು ಸರಿಯಲ್ಲ ಎಂದು ಅಪ್ಪನಿಗೆ ಅನ್ನಿಸಿದ್ದರೂ ಅಸಹಾಯಕನಾಗಿದ್ದರು . ಕಪಿಲ್ ತಮ್ಮ ಮಗಳನ್ನು ಮದುವೆಯಾಗುವಾಗ ತಮ್ಮ ಅನುಮತಿಯನ್ನು ಕೇಳಿ, ತನ್ನ ಇಚ್ಛೆ ವ್ಯಕ್ತ ಪಡಿಸಿದನ್ನು. ಈಗಾ ಅತ್ತೆಮಾವರಿಗಷ್ಟೇ ಕೇಳಿ ಅನುಮತಿ ಪಡೆದು ಮಗಳನ್ನು ಕರೆದುಕೊಂಡು ಹೋಗಲು ಮನಸ್ಸು ಒಪ್ಪದೇ ಕಪಿಲನನ್ನು (ಅಳಿಯನನ್ನು ) ಕೇಳಿದೇ ಕರೆದುಕೊಂಡು ಹೋಗುವುದು ಸರಿಯಲ್ಲ ಎಂದು ಕಪಿಲ ಬರುವ ದಾರಿಕಾಯುತ್ತ ಕುಳಿತರು. ಅಷ್ಟರಲ್ಲಿ ಕಪಿಲ ಅಂತಿಮವಾಗಿ ಬಂದು ತನ್ನ ಮಾವರನ್ನು ನೋಡಿ ಸಂತೋಷಪಡುತ್ತಾ ಆಲಂಗಿಸಿದನು.

ತುಂಬಾ ಹರಟೆಯ ನಂತರ ತಂದೆ ಕಾತರದಿಂದ ಕೇಳಿದರು.
ಅಳಿಯಂದಿರೆ , ನಾನು ಮೀನಾಕ್ಷಿಯನ್ನು ಸ್ವಲ್ಪ ದಿನ ನಮ್ಮ ಮನೆಗೆ ಕರೆದುಕೊಂಡು ಹೋಗಬೇಕು ಅಂತಾ ಬಂದಿರುವೆ, ತಮ್ಮ ಅನುಮತಿಗಾಗಿ ಕಾಯುತ್ತಿರುವೆ, ಮನೆಯಲ್ಲಿ ಎಲ್ಲರೂ ಅವಳನ್ನು ತುಂಬಾ ನೆನಪಿಸಿಕೊಳ್ಳುತ್ತಿದ್ದಾರೆ, ಎಂದು ಕೇಳಿದರು.
ಆಗ ಕಪಿಲ ಹೇಳಿದ “ಹೇ ಮಾವಯ್ಯ , ನೀವು ಅದರ ಬಗ್ಗೆ ಏಕೇ ಅನುಮತಿ ಕೇಳುತ್ತಿದ್ದೀರಿ..ಅವಶ್ಯವಾಗಿ ಕರೆದುಕೊಂಡು ಹೋಗಿ ಎಂದು ಕಪಿಲ ಹೇಳಿದನು. ಆಗ ತಂದೆಗೆ ತುಂಬಾ ಸಂತೋಷವಾಯಿತು. ಆದ್ರೇ ಮೀನಾಕ್ಷಿ ಗೆ ಮಾವ ಅನುಮತಿ ಕೊಡುತ್ತಾರೋ ಇಲ್ಲವೋ ಎಂಬ ಭಯ ಇತ್ತು. ಯಾಕಂದರೆ ಅತ್ತೆ ಮೀನಾಕ್ಷಿಯನ್ನೆ ಗಮನಿಸುತ್ತಿದ್ದರು , ಅವಳು ಹೋದಾಗ ಅತ್ತೆ ಎಲ್ಲರನ್ನು ಕೆಣಕುತ್ತಾರೆ ಎಂದು, ಕಪಿಲ್ ಕಳುಹಿಸುವುದಿಲ್ಲ ಎಂದು ಅನುಮಾನಿಸಿದ್ದರೂ . ಆದರೆ ಕಪಿಲ್ ಒಪ್ಪಿಗೆ ಕೊಟ್ಟಿರೋದ್ರಿಂದ ಮೀನಾಕ್ಷಿ ಗೆ ತುಂಬಾ ಖುಷಿ ಆಯಿತು.
ಮೀನಾಕ್ಷಿ ಖುಷಿಯಿಂದ ಬೇಗ ಬ್ಯಾಗ್ ಪ್ಯಾಕ್ ಮಾಡಿಕೊಂಡಳು, ಅತ್ತೆ ಮಾವಂದಿರ ಆಶೀರ್ವಾದ ಪಡೆದು ತಂದೆಯೊಡನೆ ಹೊರಡಲು ಸಿದ್ಧವಾದಳು. ಕಪಿಲ್ ಅವಳನ್ನು ಡ್ರಾಪ್ ಮಾಡಲು ಅವರ ಹಿಂಬಾಲಿಸಿದ. ಹೋಗುವಾಗ ಕಪಿಲ ಮುಗುಳ್ನಗುತ್ತಿದ್ದನು, ಮೀನಾಕ್ಷಿ ಅಪ್ಪನವರಿಗೆ ತಡೆದುಕೊಳ್ಳಲಾಗದೇ ಕೇಳಿದರು..
“ಅಳಿಯಂದ್ರೆ ನೀವು ಏಕೆ ನಗುತ್ತಿದ್ದೀರಿ ?” ಆಗ ಕಪಿಲ ಹೇಳಿದ, “ಏನಿಲ್ಲ ನಾಲ್ಕು ವರ್ಷಗಳ ಹಿಂದಿನ ದಿನಗಳು ನೆನಪಾಯಿತು.ಮದುವೆಗೆ ಮುಂಚೆ ಮೀನಾಕ್ಷಿಯನ್ನು ಮದುವೆ ಆಗಿ ಕರೆದುಕೊಂಡು ಹೋಗಲು ನಾನು ಪರ್ಮಿಷನ್ ಕೇಳಿದಾಗ ನೀವು ಹಿಂದೇಟು ಹಾಕುತ್ತಿದ್ದಿರಿ ..ಅಲ್ಲಿಯೇ ಕೂತು ನಾನು ಎಷ್ಟು ಬೇಡಿಕೊಳ್ಳುತ್ತಿದ್ದೆ, ನೀವು ಅನುಮತಿ ಕೊಡುತ್ತಿರಲಿಲ್ಲ ..ಈಗ ನೀವು ಅನುಮತಿ ಕೇಳುತ್ತಿದ್ದಿರಿ .” ನೆನಪಿಸಿಕೊಂಡು ನಗು ಬಂತು ಮಾವಯ್ಯ ಎಂದು ಕಪಿಲ ಹೇಳಲು, ಮೀನಾಕ್ಷಿ ಅಪ್ಪನಿಗೂ ನಗು ತಡೆಯಲಾಗಲಿಲ್ಲ..
ಆದ್ರೇ ನೀವು ಇಂದು ಅಂದಿನಿ ಸೇಡು ತೀರಿಸಿಕೊಳ್ಳಲಿಲ್ಲ. ತುಂಬಾ ಖುಷಿ ಆಯಿತು ನಿಮ್ಮೆಲರನ್ನು ಭೇಟಿಯಾಗಿ, ನೋಡಿ ಅಳಿಯಂದ್ರೆ ಸಮಯ ಹೇಗೆ ಬದಲಾಗುತ್ತದೆ…ಇದುವರೆಗೂ ಮೀನಾಕ್ಷಿಗಾಗಿ ಪರಿತಪಿಸುತ್ತಿದ್ದದ್ದು ನೀವು, ಇಂದು ಮತ್ತು ಇನ್ನುಮುಂದೆ ನಾವು ಅವಳ ಆಗಮನಕ್ಕೆ ಪರೀತಪಿಸೋದು ..”
“ನಿಜ್ವಾಗ್ಲೂ, ನಿಜಕ್ಕೂ.. ದುಃಖವೂ ಅದೇ.. ಹೆಣ್ಣಿನ ಮೇಲೆ ತೋರಿದ ಮಾಲೀಕತ್ವದ ಹಕ್ಕು… .ಎರಡು ದಿನದ ಆಚರಣೆಗಳು ಮತ್ತು ಕೆಲವು ಗಂಟೆಗಳ ಧಾರ್ಮಿಕ ಆಚರಣೆಗಳು ಹೆಣ್ಣಿನ ಮಾಲೀಕತ್ವದ ಹಕ್ಕನ್ನು ಬದಲಾಯಿಸುತ್ತವೆ…ಅದಕ್ಕೆ ಮಾವಯ್ಯ ಇನ್ನುಮುಂದೆ ಹಾಗಾಗುವದು ಬೇಡ. ಇನ್ನು ಮುಂದೆ ನಿಮ್ಮ ಸ್ವಂತ ಮಗಳನ್ನು ಕರೆದುಕೊಂಡು ಹೋಗಲು ನಮ್ಮ ಅನುಮತಿ ಕೇಳುವ ಅವಶ್ಯಕತೆ ಇಲ್ಲಾ ಎಂದು ಕಪಿಲ ತನ್ನ ಮಾವನವರಿಗೆ ಹೇಳುತ್ತಾನೆ .”

ಕಾರಿನಲ್ಲಿ ಕೂತು ವಾಪಸಾಗುತ್ತಿದ್ದಾಗ ತಂದೆಯೊಬ್ಬರು ಮಗಳು ತನ್ನ ಬದುಕು ಬಂಗಾರದಂತೆ ಮಾಡಿಕೊಂಡಿರುವದು ಹಿಂತಿರುಗಿ ನೋಡುತ್ತ, ತಮ್ಮ ಮಗಳ ಆಯ್ಕೆ ಸರಿಯಾಗಿದೆ, ಇಬ್ಬರೂ ಒಬ್ಬರನೊಬ್ಬರು ನಿಜವಾಗಿಯೂ ತುಂಬಾ ಪ್ರೀತಿಸಿ, ವಿಶ್ವಾಸ ಬೆಳಿಸಿಕೊಂಡು ಮದುವೆ ನಿರ್ಣಯ ತಗೆದುಕೊಂಡಿದ್ದಾರೆ ಎಂದು ತಂದೆ ಹೃದಯ ತೃಪ್ತಿ ಪಟ್ಟಿತು .

Share This Article
Leave a comment