ವ್ಯಕ್ತಿಯೊಬ್ಬ ತಮ್ಮ ನೆಚ್ಚಿನ ನಾಯಿಗಾಗಿ ಮುಂಬೈನಿಂದ ಚೆನ್ನೈಗೆ ಪ್ರಯಾಣಿಸಲು 2.5 ಲಕ್ಷ ರು. ಖರ್ಚು ಮಾಡಿ ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್ ಬುಕ್ ಮಾಡಿದ್ದಾರೆ.
ಇಬ್ಬರು ಬುಧವಾರ ಬೆಳಗ್ಗೆ 9 ಗಂಟೆಗೆ ಮುಂಬೈನಿಂದ ಚೆನ್ನೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಎಐ-671 ವಿಮಾನದಲ್ಲಿ ಜೆ-ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್ ಬುಕ್ ಮಾಡಿದ್ದಾರೆ.
ಈ ವಿಮಾನದಲ್ಲಿ ನಾಯಿಯು ತನ್ನ ಮಾಲೀಕನೊಂದಿಗೆ ಐಷಾರಾಮಿಯಾಗಿ ಪ್ರಯಾಣಿಸಿದೆ. ಈ ವಿಮಾನದಲ್ಲಿ 12 ಜೆ- ಕ್ಲಾಸ್ ಸೀಟುಗಳಿದೆ.
ಮುಂಬೈನಿಂದ ಚೆನ್ನೈಗೆ ಎರಡು ಗಂಟೆಗಳ ಕಾಲ ಪ್ರಯಾಣಿಸಲು ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಸರಾಸರಿ 18,000 ದಿಂದ 20,000 ರೂ. ಆಗಿದೆ. ಪ್ರಸ್ತುತ ಏರ್ ಇಂಡಿಯಾ ಕೆಲವು ನಿಯಮಗಳ ಅನುಸಾರ ಸಾಕುಪ್ರಾಣಿಗಳನ್ನು ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು