ರಾಜ್ಯದಲ್ಲಿ ಭಾನುವಾರ 31,531 ಜನರಿಗೆ ಪಾಸಿಟಿವ್ : 403 ಮಂದಿ‍ ಸಾವು‌

Team Newsnap
1 Min Read

ರಾಜ್ಯದಲ್ಲಿ ಭಾನುವಾರ ಕೊರೋನಾ ಪಾಸಿಟಿವ್ ಪ್ರಕರಣ ಸಂಖ್ಯೆ ಕುಸಿದಿದೆ. ಬೆಂಗಳೂರಿನಲ್ಲಿ ಕೇವಲ‌ 8344 ಪ್ರಕರಣಗಳೂ ಸೇರಿ ಒಟ್ಟು 31, 531 ಪಾಸಿಟಿವ್ ಪ್ರಕರಣಗಳು ವರದಿ ಯಾಗಿವೆ. ಸಾವಿನ ಸಂಖ್ಯೆ ಮಾತ್ರ ಇಳಿಕೆ ಆಗಿಲ್ಲ. ಇಂದು‌ 403 ಮಂದಿ ಸಾವನ್ನಪ್ಪಿದ್ದಾರೆ

ರಾಜ್ಯದಲ್ಲಿ ಇಂದು 9,713 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 10,3506 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,13, 219 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.

ಈ ಪೈಕಿ ಇಂದು 31,531 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 22,03,462ಕ್ಕೆ ಏರಿಕೆಯಾಗಿದೆ.

36 ಸಾವಿರ ಮಂದಿ ಗುಣಮುಖ :

ಭಾನುವಾರ 36,475 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 15,81,457 ಮಂದಿ ಗುಣಮುಖರಾಗಿದ್ದಾರೆ

  • 403 ಮಂದಿ ಸೇರಿ ಸೋಂಕಿನಿಂದ ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 21,837ಕ್ಕೆ ಏರಿಕೆಯಾಗಿದೆ.
  • ಸದ್ಯ ರಾಜ್ಯದಲ್ಲಿ 6,00,147 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.
  • ಬೆಂಗಳೂರು ಒಂದರಲ್ಲೇ 8344 ಹೊಸ ಪ್ರಕರಣಗಳು ದಾಖಲಾಗಿವೆ. 143 ಮಂದಿ ಸಾವನ್ನಪ್ಪಿದ್ದಾರೆ.
  • ಬಳ್ಳಾರಿಯಲ್ಲಿ 1729, ಬೆಳಗಾವಿ 1762, ದಕ್ಷಿಣ ಕನ್ನಡ 957, ಹಾಸನ 1182, ಮಂಡ್ಯ 1188, ಮೈಸೂರು 1811, ತುಮಕೂರು 2138 ಹಾಗೂ ಉಡುಪಿಯಲ್ಲಿ 745 ಹೊಸ ಹಾಗೂ ಉತ್ತರ ಕನ್ನಡದಲ್ಲಿ 1087 ಪ್ರಕರಣಗಳು ದಾಖಲಾಗಿವೆ.

ಜಿಲ್ಲಾವಾರು ವಿವರ:

ಬಾಗಲಕೋಟೆ431
ಬಳ್ಳಾರಿ1729
ಬೆಳಗಾವಿ1762
ಬೆಂಗಳೂರು ಗ್ರಾಮಾಂತರ1087
ಬೆಂಗಳೂರು ನಗರ8344
ಬೀದರ್129
ಚಾಮರಾಜನಗರ440
ಚಿಕ್ಕಬಳ್ಳಾಪುರ558
ಚಿಕ್ಕಮಗಳೂರು963
ಚಿತ್ರದುರ್ಗ640
ದಕ್ಷಿಣಕನ್ನಡ957
ದಾವಣಗೆರೆ1155
ಧಾರವಾಡ937
ಗದಗ453
ಹಾಸನ1182
ಹಾವೇರಿ184
ಕಲಬುರಗಿ645
ಕೊಡಗು191
ಕೋಲಾರ569
ಕೊಪ್ಪಳ617
ಮಂಡ್ಯ709
ಮೈಸೂರು1811
ರಾಯಚೂರು464
ರಾಮನಗರ403
ಶಿವಮೊಗ್ಗ643
ತುಮಕೂರು2138
ಉಡುಪಿ745
ಉತ್ತರಕನ್ನಡ1087
ವಿಜಯಪುರ330
ಯಾದಗಿರಿ233
Share This Article
Leave a comment