ಹಲಗೂರು:- ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಭಾನುವಾರ ಹಲಗೂರು ಮತ್ತು ಮಳವಳ್ಳಿ ಘಟಕದ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸ್ನೇಹ ಮೆಡಿಕೇರ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ಮತ್ತು ಮಧುಮೇಹ ಹಾಗೂ ರಕ್ತದೊತ್ತಡ ಮತ್ತು ನರ ದೌರ್ಬಲ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ರೋಗಿಗಳನ್ನು ತಪಾಸಣೆ ಮಾಡಿ ಉಚಿತವಾಗಿ ಔಷಧಿಗಳನ್ನು ನೀಡಲಾಯಿತು.
ತಪಾಸಣೆ ನಡೆಸಿದ ವೈದ್ಯಾಧಿಕಾರಿಗಳಾದ ಜಗದೀಶ್ ಅವರು ಮಾತನಾಡಿ ,ತಪಾಸಣೆ ನಡೆಸಿದರಲ್ಲಿ 60 ಪರ್ಸೆಂಟ್ ಆರೋಗ್ಯ ತಪಾಸಣೆ ಹಾಗೂ ನಲವತ್ತು ಪರ್ಸೆಂಟ್ ರಕ್ತದೊತ್ತಡ ದೌರ್ಬಲ್ಯ ಹಾಗೂ 20% ನರ ದೌರ್ಬಲ್ಯ ದವರು ಇದ್ದಾರೆ. ಇವರುಗಳಿಗೆ ಯಾವುದೇ ದೊಡ್ಡ ಕಾಯಿಲೆಗಳು ಇರುವುದಿಲ್ಲ ಪಟ್ಟಣ ಪ್ರದೇಶದ ದೊಡ್ಡ ಆಸ್ಪತ್ರೆಗೆ ತೋರಿಸುವ ಅವಶ್ಯಕತೆ ಇರುವುದಿಲ್ಲ ಇವರಿಗೆ ಇಲ್ಲೇ ಉಚಿತವಾಗಿ ಔಷಧಿಗಳು ನೀಡಿ ಸಕಾಲಕ್ಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶಂಕರೇಗೌಡ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಕೇವಲ ಹೋರಾಟ ಕಷ್ಟೇ ಸೀಮಿತವಾಗದೆ, ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತಿದೆ, ಆರೋಗ್ಯ ತಪಾಸಣೆ ಶಿಬಿರ,ರಕ್ತದಾನ ಶಿಬಿರಗಳನ್ನು ಏರ್ಪಡಿಸುತ್ತಿದೆ, ನಾರಾಯಣಗೌಡ ನೇತೃತ್ವದ ಈ ರಕ್ಷಣಾ ವೇದಿಕೆಗೆ 25 ವರ್ಷ ತುಂಬಿದ ಈ ಸಂದರ್ಭದಲ್ಲಿ ಈ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದು, ಭಾಷೆ, ನೆಲ,ಜಲ ರಕ್ಷಣೆಗಾಗಿ ಹೋರಾಟ ನಡೆಸುವುದು ಅಲ್ಲದೆ, ಬೆಳಗಾವಿ ಕನ್ನಡಿಗರ ಪರ ಹೋರಾಟ ನಡೆಸಿದ್ದು ಕನ್ನಡಿಗರ ಭಾಷೆ ನೆಲೆಗೆ ಬೆಲೆ ಸಿಗುವ ನಿಟ್ಟಿನಲ್ಲಿ ಹೋರಾಟ ನಡೆಸಿದ ಮೇರೆಗೆ ಕೇಂದ್ರ ಸರ್ಕಾರ ಕೇವಲ ಹಿಂದಿ ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆಯಲು ಜಾರಿಯಲ್ಲಿದ್ದ ನೀತಿ ಬದಲಾಗಿ ಕನ್ನಡದ ನಿಘಂಟಿನ ಮೂಲಕ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುಮೋದನೆ ನೀಡಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ದಾರಿಯಾಗಿದೆ, ಈ ಗ್ರಾಮದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಡಾ. ಜಗದೀಶ್ ತಂಡ ರವರ ನೇತೃತ್ವದಲ್ಲಿ ಆರೋಗ್ಯ ಒದಗಿಸುವ ಒಂದು ಯೋಜನೆಯಾಗಿದ್ದು, ಹಲಗೂರು ಹೋಬಳಿ ಜನರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ R ಅಶೋಕ್ ನೇಮಕ
ತಾಲೂಕು ಘಟಕದ ಅಧ್ಯಕ್ಷರಾದ ಅಪ್ಪೆ ಗೌಡ ಮಾತನಾಡಿ ನಮ್ಮ ರಾಜ್ಯಾಧ್ಯಕ್ಷರಾದ ನಾರಾಯಣಗೌಡರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಮುಂದೆಯೂ ಸಹ ಇನ್ನು ಹೆಚ್ಚಿನ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ನಡೆಸುತ್ತೇವೆ ಎಂದರು.
ಹಲಗೂರು ಹೋಬಳಿ ರಕ್ಷಣಾ ವೇದಿಕೆ ಘಟಕದ ಅಧ್ಯಕ್ಷರಾದ ಗಂಗರಾಜ್ ಮಾತನಾಡಿ ನಾನು ಪ್ರಥಮ ಬಾರಿಗೆ ಮೊದಲನೇ ಕಾರ್ಯಕ್ರಮವನ್ನು ಆಯೋಜಿಸಿದ್ದೇನೆ ಮುಂದೆಯೂ ಸಹ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸುತ್ತೇನೆ.
ಸಾರ್ವಜನಿಕರು ಪಟ್ಟಣ ಪ್ರದೇಶಗಳಿಗೆ ಹೋಗಿ ದೊಡ್ಡ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ವೆಚ್ಚ ಮಾಡುವುದಕ್ಕಿಂತ ಇಂತಹ ಶಿಬಿರಗಳನ್ನು ಸದ್ಬಳಕೆ ಮಾಡಿಕೊಂಡರೆ ನಿಮಗೆ ಹಣದ ಖರ್ಚು ಸಹ ಕಡಿಮೆಯಾಗುತ್ತದೆ ನಿಮ್ಮ ಆರೋಗ್ಯವು ಸಹ ವೃದ್ಧಿಸುತ್ತದೆ ಇಂದು ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ ಮತ್ತು ಮಧುಮೇಹ ಕೂಡ ತಪಾಸಣೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪ್ಪು ಗೌಡ .ಗಂಗರಾಜು. ನಾಗಣ್ಣ. ಜಗದೀಶ .ಮಲ್ಲಿಕ್. ದೊಡ್ಡ ಲಿಂಗಯ್ಯ. ನಾಗರಾಜು. ಸೇರಿದಂತೆ ಇತರರು ಇದ್ದರು.
More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು