ನಮ್ಮ ಮತ ನಮ್ಮ ಪಥ

Team Newsnap
2 Min Read
Election to Tripura Legislative Assembly today - 13 percent voting ತ್ರಿಪುರಾ ವಿಧಾನ ಸಭೆಗೆ ಇಂದು ಚುನಾವಣೆ - ಶೇ 13 ರಷ್ಟು ಮತದಾನ
WhatsApp Image 2023 04 15 at 2.55.16 PM
ಸ್ನೇಹಾ ಆನಂದ್

ನಮ್ಮ ಮತ ನಮ್ಮ ಪಥ …
ನಮ್ಮ ಭಾರತ ಈಗ ಯಶಸ್ಸಿನ ದಿಕ್ಕಿನತ್ತ ಸಾಗುತ್ತಿದೆ, ನಿಸ್ವಾರ್ಥ ಸೇವೆಯತ್ತ ನಿಧಾನವಾಗಿ ವಾಲುತ್ತಿದೆ, ಹೆಮ್ಮೆಯ ದಾಪುಗಾಲು ಇಡುತ್ತಿದೆ ಜಗತ್ತಿನಲ್ಲಿ..
ಜನ ಜಾಗೃತರಾಗಿದ್ದಾರೆ, ಮತದ ಮಹತ್ವ ತಿಳಿದು ಮತ ಚಲಾಯಿಸುತಿದ್ದಾರೆ..

ಈ ಪ್ರಬುದ್ಧತೆಯ ಪಥ ಹೀಗೆ ಸಾಗಲಿ
ನಿರಂತರವಾಗಿ ಎಂದು ಮನಃಪೂರ್ವಕವಾಗಿ ಆಶಿಸೋಣ ಮತ್ತು ಹೃತ್ಪೂರ್ವಕವಾಗಿ ಹಾರೈಸೋಣ, ನಮ್ಮ ಕನ್ನಡಮ್ಮ ಹೀಗೆಯೇ ಜಯಭೇರಿ ಬಾರಿಸಲಿ ಹೆಮ್ಮೆಯಿಂದ ಕರ್ನಾಟಕದ ಬಾವುಟ ಇನ್ನೂ ಮೇಲಕ್ಕೆ ಹಾರಿಸಲಿ..

ಭಾರತಮಾತೆಯ ಪ್ರೀತಿಯ ಮಗಳು ನಮ್ಮ ಈ ಕನ್ನಡತಿ, ಅವಳ ಹೆಮ್ಮೆಯ ಮಕ್ಕಳು ನಾವು…
ಗಂಧದ ನಾಡು ನಮ್ಮದು, ತೇಯ್ದು ಗಂಧದ ಸುಗಂಧದಿಂದ ನಮ್ಮನ್ನು ಸ್ನಾನ ಮಾಡಿಸಿದ್ದಾಳೆ, ಹೀಗಾಗಿ. ನಮ್ಮ ಪ್ರತಿಯೊಂದು ನಡೆ,ನುಡಿ ಪರಿಶುದ್ಧವಾಗಿರಬೇಕು…

ಮತ ಚಲಾವಣೆ ನಮ್ಮ ದೇಶ ನಮಗೆ ನೀಡಿದ ಹಕ್ಕು, ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಪ್ರಜೆಗಳ ಮತಗಳಿಂದಲೇ ನಾಯಕನ ಆಯ್ಕೆ..
ಆಯ್ಕೆಯಾದ ನಾಯಕ ಎತ್ತರಕ್ಕೆ ಏರಿದ ಮೇಲೆ, ಏಣಿಯಂತಿರುವ ಪ್ರಜೆಗಳನ್ನು ಮರೆಯಬಾರದು, ಹತ್ತಿದ ಏಣಿಯನ್ನು ಪಟಕ್ಕಂತ ಒದ್ದರೆ ಕೆಳಗೆ ಹಾರಿ ಪತನವಾಗುವುದೇ ಸರಿ, ಹೀಗೆ ಆಗಿವೆ ಈ ನಡುವೆ ಎಷ್ಟೋ ಪಕ್ಷಗಳ ಗತಿ..!
ಇನ್ನುವರೆಗೂ ಬುದ್ಧಿ ಬಂದಿಲ್ಲ, ಪತನವಾದ ಪಕ್ಷಗಳು ಚುನಾವಣೆ ಬಂತೆಂದರೆ ತೆವಳಲು ಶುರು ಮಾಡುತ್ತವೆ…

ತಮ್ಮ ಅಧಿಕಾರವಾದ್ದಾಗ ಭಾರತಾಂಬೆಗೆ ಸ್ವಲ್ಪವೂ ಗೌರವ ಕೊಡದೆ, ತಾವೇ ತಮ್ಮ ಕೈಯಾರ ತಂದುಕೊಂಡ ಪರಿಸ್ಥಿತಿ ಇದು, ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೊಡುವ ಪಕ್ಷಗಳು ಹೀನಾಯವಾಗಿ ಪತನವಾಗುವದರಲ್ಲೇ ದೇಶದ ಹಿತವಿದೆ..!

ಓಟು ನಮ್ಮ ಹಕ್ಕು, ಹೀಗಾಗಿ ಹಾಕಲೇ ಬೇಕು, ಒಂದು ರನ್ ಹೆಚ್ಚಿಗೆ ಬಂದರೂ ಕೂಡ ಗೆಲುವಿಗೆ ಕಾರಣ ಪ್ರತಿಯೊಂದು ಆಟದಲ್ಲಿ , ಹಾಗೆ ಅಲ್ಲವೇ ನಮ್ಮ ನೆಚ್ಚಿನ ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಒಂದು ಚಿನ್ನದಂತಹ ಮತ ಕಾರಣವಾಗಬಹುದಲ್ಲವೇ….!!

ಎಲ್ಲಾ ಪಕ್ಷಗಳಲ್ಲೂ ಕೆಟ್ಟ ಜನರು ಇದ್ದೇ ಇರುತ್ತಾರೆ, ಹೀಗಾಗಿ ಸಬಲ, ಸುಸಂಸ್ಕೃತ ನಾಯಕ ಇದ್ದ ಕಡೆಗೆ ನಮ್ಮ ಮತವಿರಬೇಕು..
ನಾಯಕನೇ ಆ ದೋಣಿಯ ನಾವಿಕ ಎಂದಾಗ
ದೋಣಿಯಲ್ಲಿರುವ ನಾವು ಮುಳುಗಲು ಸಾಧ್ಯವೇ, ನಮ್ಮ ಹಿತದ ಬಗ್ಗೆ ನಾಯಕ ಕಾಳಜಿ ತೋರೇ ತೋರುತ್ತಾನೆ ಧೀಮಂತ ಹೆಮ್ಮೆಯ ನಮ್ಮ ನಾಯಕ …

ಅದಕ್ಕೆ ಹೇಳುವುದು ಒಳ್ಳೆಯ ನಾಯಕ ನಮಗೆ ಈಗಾಗಲೇ ಸಿಕ್ಕಿದ್ದಾರೆ , ಮತ್ತೇ ಆ ಅಪರೂಪದ
ವ್ಯಕ್ತಿಯನ್ನು ಉಳಿಸಿಕೊಳ್ಳವ ಪ್ರಯತ್ನ ನಮ್ಮಲ್ಲಿರಲಿ ಸದಾ…
ನಮ್ಮೆಲ್ಲರ ಓಟಿಗೆ ಆ ಒಂದು ದೊಡ್ಡ ತಾಕತ್ತಿದೆ,
ಗೆಲುವಿನಲ್ಲಿ ಹೆಮ್ಮೆ ಇರಬೇಕು, ನಾಚಿಕೆ ಬರಬಾರದು,
ನಮ್ಮ ಹೊಣೆಗಾರಿಕೆ, ಹೆಮ್ಮೆಯ ಮತಗಳ ಎಣಿಕೆ …

Share This Article
Leave a comment