“ನಮ್ಮಹತ್ರ ಟ್ರೈನಿಂಗ್ ತಗೋತಾರೆ. ಜಾಸ್ತಿ ಸಂಬಳ ಕೊಡೊ ಕಡೆ ಹೋಗ್ತಾರೆ’ ಇದು ಜೆಡಿಎಸ್ ಪಕ್ಷ ಬಿಟ್ಟುಹೋಗುವವರ ಬಗ್ಗೆ ಆ ಪಕ್ಷದ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಆಡಿದ ಮಾತು.
ನಮ್ಮದು ಫ್ಯಾಕ್ಟರಿ. 1983 ರಿಂದ ಹುಟ್ಟು ಹಾಕಿದ್ದೀವಿ ಎಂದು ಅವರು ಹಾಸನದಲ್ಲಿ ಶುಕ್ರವಾರ ಹೇಳಿದರು. ಧರ್ಮಕ್ಕೆ ಜಯ ಇದ್ದೇ ಇರುತ್ತೆ. ಸುಳ್ಳು ಜಾಸ್ತಿ ದಿನ ನಡೆಯಲ್ಲ. ದೇವರು ಕಣ್ಬಿಟ್ಟು ಈಗ ಕಾಂಗ್ರೆಸ್ ಪಕ್ಷವನ್ನು ಕ್ಲೋಸ್ ಮಾಡಿಸುತ್ತಿದ್ದಾನೆ. ಈಗಾಗಲೇ ಪಂಜಾಬ್‌ನಲ್ಲಿ ಕ್ಲೋಸ್ ಆಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಈ ಪರಿಸ್ಥಿತಿ ಬಂತಲ್ಲಾ ಅಂಥ ವ್ಯಥೆಯಾಗುತ್ತಿದೆ ಎಂದು ಕುಟುಕಿದರು.
ಜೆಡಿಎಸ್‌ನ ಕೆಲವು ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವ ಕುರಿತು ಮಾಜಿ ಸಚಿವರು ಪ್ರತಿಕ್ರಿಯಿಸಿ, ನಮ್ಮ ಮಿಷನ್ ಓಡುತ್ತಿದೆ. ಕಾಂಗ್ರೆಸ್, ಜೆಡಿಎಸ್ ಮಿಷನ್ ತೆಗೆದುಕೊಂಡು ಓರಾಯಲ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಮಿಷನ್ ಎಷ್ಟುಗಟ್ಟಿ ಇದೆ ಅಂತ ಲೆಕ್ಕ ಹಾಕಲಿ ಎಂದು ಗಟ್ಟಿಧ್ವನಿಯಲ್ಲಿ ಹೇಳಿದ್ದಾರೆ.
More Stories
ಚಿನ್ನ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು; ಇತಿಹಾಸ ನಿರ್ಮಿಸಿದ ಆಟಗಾರ್ತಿ!
ಸಂಖ್ಯಾ ತಜ್ಞ ಆರ್ಯವರ್ಧನ್ ಕುಟುಂಬದ ಆಸ್ತಿ 5 ಸಾವಿರ ಕೋಟಿ ರು : ಬಿಗ್ ಬಾಸ್ ನಲ್ಲಿ ಬಹಿರಂಗ
ಮೊಬೈಲ್ ಫೋನ್ ಬೇಡಿಕೆ : ಮನೆ ಬಿಟ್ಟು ಹೋಗಿದ್ದ ಯುವಕ ಶವವಾಗಿ ಪತ್ತೆ!