ಕಾಶಿ ಯಾತ್ರೆ ಸಬ್ಸಿಡಿಗಾಗಿ 7.5 ಕೋಟಿ ರು ಬಿಡುಗಡೆಗೆ ಆದೇಶ

Team Newsnap
1 Min Read

ಕಾಶಿ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬರಿಗೂ 5 ಸಾವಿರ ರು ಗಳ ಸಹಾಯಧನ ನೀಡಲು ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ರ ಬಜೆಟ್‌ನಲ್ಲಿ ಘೋಷಣೆ ಮಾಡಿದ ಈ ಯೋಜನೆಗೆ ಹಣ ಬಿಡುಗಡೆ ಮಾಡಿ ಚಾಲನೆ ನೀಡಿದ್ದಾರೆ.

ಕಾಶಿ ಯಾತ್ರೆ ಯೋಜನೆಯಡಿ ಪ್ರತಿ ವರ್ಷ 30 ಸಾವಿರ ಯಾತ್ರಾರ್ಥಿಗಳಿಗೆ ಸಹಾಯಧನ ನೀಡಲಾಗುವುದು.

ಈ ಕುರಿತಂತೆ ವಿವರಣೆ ನೀಡಿದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ನಾಗರಿಕರು ಈ ಸಬ್ಸಿಡಿಯನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ಸರ್ಕಾರವು ಪ್ರತ್ಯೇಕ ಅಧಿಸೂಚನೆಯನ್ನು ಹೊರಡಿಸುತ್ತದೆ ಎಂದರು

ಫಂಡರಾಪುರದ ಅತಿಥಿ ಗೃಹವನ್ನು ಮೇಲ್ದರ್ಜೆಗೇರಿಸುವುದಾಗಿ ಬಜೆಟ್ ಭರವಸೆ ನೀಡಲಾಗಿತ್ತು. ಆದರೆ ಹೊಸ ಅತಿಥಿ ಗೃಹ ನಿರ್ಮಿಸಲಾಗುವುದು ಎಂದು ಇದನ್ನು ಮಾರ್ಪಡಿಸಲಾಗಿದೆ.
ಪಂಢರಪುರಕ್ಕೆ ಉತ್ತರ ಕರ್ನಾಟಕದಿಂದ ಸಾವಿರಾರು ಜನರು ಭೇಟಿ ನೀಡುತ್ತಾರೆ, ಅತಿಥಿ ಗೃಹದಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದು ಜೊಲ್ಲೆ ಹೇಳಿದರು.

Share This Article
Leave a comment