December 22, 2024

Newsnap Kannada

The World at your finger tips!

krs full

ಸೆ.28 ರಿಂದ 18 ದಿನಗಳವರೆಗೆ ತ. ನಾಡಿಗೆ ಮತ್ತೆ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ – ರಾಜ್ಯಕ್ಕೆ ಶಾಕ್

Spread the love

ಬೆಂಗಳೂರು: ತಮಿಳುನಾಡಿಗೆ ಮತ್ತೆ ಸೆಪ್ಟೆಂಬರ್ 28 ರಿಂದ ಪ್ರತಿ ದಿನ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ CWRC  ಸಭೆಯಲ್ಲಿ ಮಂಗಳಾರ ಆದೇಶ ಮಾಡಿದೆ.

ಮುಂದಿನ 18 ದಿನಗಳ ಕಾಲ ಅಂದರೆ ಅಕ್ಟೋಬರ್ 15ರವರೆಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶದಲ್ಲಿ ತಿಳಿಸಿದೆ.

ಕರ್ನಾಟಕದ ವಾದ :

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ರಾಜ್ಯದ ನೀರಿನ ಸಮಸ್ಯೆ ಬಗ್ಗೆ ತಜ್ಞರಿಗೆ ಮನವರಿಕೆ ಮಾಡಿಕೊಡುವಂತಹ ಪ್ರಯತ್ನ ಮಾಡಿದರು.

ರಾಜ್ಯದಲ್ಲಿ ಶೇಕಡಾ 33 ರಷ್ಟು ಮಳೆಯ ಕೊರತೆ ಇದೆ. ಕಾವೇರಿ ಕಣಿವೆ ವ್ಯಾಪ್ತಿಗೆ ಬರುವ 15ಕ್ಕೂ ಹೆಚ್ಚು ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಹೀಗಿರುವಾಗ ಕಾವೇರಿ ಕಣಿವೆಯಲ್ಲಿ ನೀರು ಇಲ್ಲ. ಕಾವೇರಿ ಕಣಿವೆಯಲ್ಲಿ ಸುಮಾರು 49 ಟಿಎಂಸಿ ನೀರು ಮಾತ್ರ ಇದೆ. ಒಂದು ವೇಳೆ ಮತ್ತೆ ರಾಜ್ಯದಲ್ಲಿ ಮಳೆಯಾಗದಿದ್ದರೆ, ಅಷ್ಟೂ ನೀರನ್ನು ತಮಿಳುನಾಡಿಗೆ ಬಿಟ್ಟರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಆಗಲಿದೆ.
ಕಾವೇರಿ ನದಿ ನೀರನ್ನು ರಾಜ್ಯದ 4 ಜಿಲ್ಲೆಗಳು ಅವಲಂಭಿಸಿವೆ. ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಒಟ್ಟು ನಾಲ್ಕು ಜಿಲ್ಲೆಯ ಜನರು ಕುಡಿಯಲು ಕಾವೇರಿ ನೀರನ್ನೇ ಅವಲಂಭಿಸಿದ್ದಾರೆ.

ಈ ಸ್ಥಿತಿಯಲ್ಲಿನಾವು ತಮಿಳುನಾಡಿಗೆ ನೀರನ್ನು ಕೊಟ್ಟರೆ ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ದೊಡ್ಡ ಹೊಡೆತ ಬೀಳಲಿದೆ. ಅಲ್ಲದೇ ಬೇಸಿಗೆಯಲ್ಲಿ ಮತ್ತೆ ಕಾವೇರಿ ನೀರು ಬಿಡುವಂತೆ ತಮಿಳುನಾಡು ಕೇಳುತ್ತದೆ. ಯಾವುದೇ ಕಾರಣಕ್ಕೂ ನೀರನ್ನು ಕೊಡಲು ಆಗುವುದಿಲ್ಲ ಎಂದು ವಾದ ಮಂಡಿಸಿದರು.

ತಮಿಳುನಾಡು ವಾದವೇನು ?

ಕರ್ನಾಟಕದಲ್ಲಿ ಮತ್ತೆ ಮಳೆ ಬೀಳುತ್ತಿದೆ. ರಾಜ್ಯದ ರೈತರ ಹಿತ ದೃಷ್ಟಿಯಿಂದ ಪ್ರತಿನಿತ್ಯ 12000 ಕ್ಯೂಸೆಕ್ ನೀರು ಬಿಡಬೇಕು. ಕಾವೇರಿ ಕಣಿವೆಯಲ್ಲಿ ಮತ್ತೆ ಮಳೆಯಾಗುತ್ತಿದೆ. ನಾವು ಹೇಳಿದಷ್ಟು ನೀರನ್ನು ಬಿಟ್ಟರೆ ರಾಜ್ಯದ ರೈತರಿಗೆ ಅನುಕೂಲ ಆಗಲಿದೆ ಎಂದು ವಾದಿಸಿತ್ತು.

ಎರಡೂ ಕಡೆ ವಾದ-ಪ್ರತಿವಾದವನ್ನು ಆಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು, ಮುಂದಿನ 18 ದಿನಗಳವರೆಗೆ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿತು.

ಒಂದು ಲೆಕ್ಕದಲ್ಲಿ ಕರ್ನಾಟಕದ ಪಾಲಿಗೆ ಇವತ್ತಿನ ಆದೇಶ ಸಮಾಧಾನಕರವಾಗಿದೆ. ಏಕೆಂದರೆ ರಾಜ್ಯ ಸರ್ಕಾರ ತಮಿಳುನಾಡಿಗೆ 2500 ಕ್ಯೂಸೆಕ್ ನೀರು ಬಿಡಲು ಸಾಧ್ಯ ಎಂದು ಈ ಹಿಂದೆ ಹೇಳಿತ್ತು.ನಟ ಬ್ಯಾಂಕ್ ಜನಾರ್ಧನ್ ಗೆ ಹೃದಯಾಘಾತ: ಐಸಿಯುನಲ್ಲಿ ಚಿಕಿತ್ಸೆ

ಅಂದರೆ ಡ್ಯಾಂನಲ್ಲಿ ಎಷ್ಟೇ ನೀರನ್ನು ಹಿಡಿದಿಟ್ಟುಕೊಂಡರೂ ನ್ಯಾಚುರಲ್ ಆಗಿ ಸುಮಾರು 1000 ಕ್ಯೂಸೆಕ್ ನಿಂದ 2000 ಕ್ಯೂಸೆಕ್ ವರೆಗೆ ಹರಿದು ಹೋಗಲಿದೆ.

Copyright © All rights reserved Newsnap | Newsever by AF themes.
error: Content is protected !!