ಆಪರೇಷನ್ ಹಸ್ತ ; ಬಿಜೆಪಿ ಫುಲ್ ಅಲರ್ಟ್ – ಶಾಸಕರ ಮುನಿಸು ಶಮನಕ್ಕೆ ಬಿಜೆಪಿ ಪ್ರಯತ್ನ

Team Newsnap
1 Min Read

ಬೆಂಗಳೂರು : ಲೋಕಸಭೆ ಚುನಾವಣೆಗೆ ಸಿದ್ದತೆ ನಡೆಸಿರುವ ಕಾಂಗ್ರೆಸ್ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ ಮೂಲಕ ಶಾಸಕರನ್ನು ಸೆಳೆಯುವ ಪ್ರಯತ್ನ ಮುಂದುವರೆಸಿದೆ.

ಬಿಜೆಪಿ ಶಾಸಕರಾದ ಎಸ್​.ಟಿ.ಸೋಮಶೇಖರ್ , ಶಿವರಾಮ್ ಹೆಬ್ಬಾರ್ ಸೇರಿದಂತೆ ಕೆಲವು ಶಾಸಕರು ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಸುಳಿವು ಅರಿತು ಹೈ ಅಲರ್ಟ್ ಆದ ಬಿಜೆಪಿ ಶಾಸಕರ ಮುನಿಸು ಶಮನಕ್ಕೆ ಶತಪ್ರಯತ್ನ ಆರಂಭಿಸಿದೆ

ಸೋಮಶೇಖರ್ ಅವರಿ​ಗೆ ಸಣ್ಣಪುಟ್ಟ ವಿಚಾರದಲ್ಲಿ ಅಸಮಾಧಾನವಿದೆ. ಆದರೆ ಅದು ಸರಿಪಡಿಸಲಾರದಷ್ಟು, ಪಕ್ಷ ಬಿಡುವಷ್ಟು ದೊಡ್ಡದಲ್ಲ ಎಂದು ಹೇಳಿದ ಬಿಜೆಪಿ ನಾಯಕ ಸಿ.ಟಿ.ರವಿ, ಬಿಬಿಎಂಪಿ, ಸ್ಥಳೀಯ ಚುನಾವಣೆಗಳ ಆಸೆ ತೋರಿಸಿ ಸೋಮಶೇಖರ್ ಬೆಂಬಲಿಗರನ್ನು ಕಾಂಗ್ರೆಸ್ ನಾಯಕರು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಆಪರೇಷನ್ ಹಸ್ತದ ಬಗ್ಗೆ ಆಕ್ರೋಶ ಹೊರಹಾಕಿದ ರವಿ ಅವರು, ನಿಮಗೆ ಸ್ಪಷ್ಟ ಬಹುಮತವಿದೆ ಅಂತ ಅತಿಯಾಗಿ ಮಾಡಲು ಹೋಗಬೇಡಿ. ‌ನಾವೇನಾದರೂ ಮಾಡಿದರೆ ನೀವು ಮತ್ತೆ ಮೇಲೆ ಏಳಲು ಆಗುವುದಿಲ್ಲ. ಆಪರೇಷನ್‌ಗೆ ಆಪರೇಷನ್ ಮಾಡಲು ಗೊತ್ತು ಎಂದು ಎಚ್ಚರಿಕೆ ನೀಡಿದ್ದಾರೆ.ತ. ನಾಡಿಗೆ ಮಣಿದು ಕಾವೇರಿ ನೀರು ಹರಿಸಿದ ಸರ್ಕಾರ : ಆ21 ರಂದು ರಾಷ್ಟ್ರೀಯ ಹೆದ್ದಾರಿ ತಡೆಗೆ ಬಿಜೆಪಿ ಸಿದ್ದತೆ

ನಮ್ಮ ಪಕ್ಷ ಉಳಿಸಿಕೊಳ್ಳುವುದು, ಕಟ್ಟುವುದು ನಮಗೆ ಗೊತ್ತಿದೆ. ಪಗಡೆ, ಚೆಸ್ ಏಕಮುಖ ಅಲ್ಲ. ಅವರು ದಾಳ ಉರುಳಿಸಿದರೆ ನಾವೂ ಆಡುತ್ತೇವೆ. ನಾವು ಚೆಕ್ ಮೇಟ್ ಮಾಡಿದರೆ ಸಣ್ಣಪುಟ್ಟ ಸೈನಿಕರಿಗೆ ಮಾಡುವುದಿಲ್ಲ. ನಾವು ರಾಜನಿಗೇ ಚೆಕ್‌ಮೇಟ್ ಮಾಡುತ್ತೇವೆ ಎಂದು ಹೇಳುವ ಮೂಲಕ ಸಿಟಿ ರವಿ ಅವರು ಕಾಂಗ್ರೆಸ್​ನ ಪ್ರಬಲ ನಾಯಕರಿಗೆ ಗಾಳ ಹಾಕುವ ಎಚ್ಚರಿಕೆ ನೀಡಿದ್ದಾರೆ

Share This Article
Leave a comment